ಕೊರೋನ ವೈರಸ್ ಸೋಂಕು ವರದಿ ನಿರಾಕರಿಸಿದ ಮಹಾರಾಷ್ಟ್ರದ ಸಚಿವ

Update: 2020-04-15 13:52 GMT
ಫೋಟೊ ಕೃಪೆ: twitter.com/Awhadspeaks

ಮುಂಬೈ,ಎ.15: ತಾನು ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದೇನೆ ಎಂಬ ಕೆಲವು ಮಾಧ್ಯಮ ವರದಿಗಳನ್ನು ನಿರಾಕರಿಸಿರುವ ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅಹ್ವಾಡ್ ಅವರು,ತನಗೆ ಸೋಂಕು ಇಲ್ಲ ಎನ್ನುವುದನ್ನು ದೃಢಪಡಿಸಿರುವ ಪರೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.

‘ನಾನು ಚೆನ್ನಾಗಿದ್ದೇನೆ. ಬೀದಿಗಳಿಗಿಳಿದು ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವು ಟಿವಿ ವಾಹಿನಿಗಳು ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ನನ್ನನ್ನು ಬಳಸಿಕೊಳ್ಳುತ್ತಿವೆ’ ಎಂದು ಅವರು ಟ್ವೀಟಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅಹ್ವಾಡ್ ಅವರು ಸಂಪರ್ಕಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಯೋರ್ವರಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಅವರಿಗೆ ಸೂಚಿಸಲಾಗಿತ್ತು.

ಅಹ್ವಾಡ್ ಅವರ ಸಂದರ್ಶನವನ್ನು ನಡೆಸಿದ್ದ ಪತ್ರಕರ್ತ ನೋರ್ವನಲ್ಲಿಯೂ ಸೋಮವಾರ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News