500 ಕಿ.ಮೀ. ನಡೆದು ಊರು ಸೇರಲು ಹೊರಟಿರುವ ನಾಲ್ವರು ವಿದ್ಯಾರ್ಥಿಗಳು

Update: 2020-04-23 05:56 GMT

ಲಕ್ನೊ, ಎ.22: ಲಾಕ್‌ಡೌನ್ ಜಾರಿಯಾದಂದಿನಿಂದ ಉತ್ತರಪ್ರದೇಶದ ಬರೇಲಿಯ ಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ತಮ್ಮ ಹುಟ್ಟೂರು ವಾರಣಾಸಿಗೆ ಕಾಲ್ನಡಿಗೆಯಲ್ಲಿ ಸಾಗಿದ್ದು, ಬಿರುಬಿಸಿಲನ್ನೂ ಲೆಕ್ಕಿಸದೆ ನಡೆಯುತ್ತಾ ಬುಧವಾರ ಲಕ್ನೋ ತಲುಪಿದ್ದಾರೆ.

ಬರೇಲಿಯ ರೋಹಿಲ್‌ಖಂಡ್ ವಿವಿಯ ವಿದ್ಯಾರ್ಥಿಗಳಾದ ಮೂವರು ಯುವತಿಯರು ಮತ್ತು ಒಬ್ಬ ಯುವಕ ತಮ್ಮ ಹುಟ್ಟೂರಿನತ್ತ ಸಾಗಿದ್ದು 24 ಗಂಟೆಯಲ್ಲಿ ಸುಮಾರು 250 ನಡೆದು ಬುಧವಾರ ಲಕ್ನೊ ತಲುಪಿದ್ದಾರೆ. ಹುಟ್ಟೂರು ವಾರಣಾಸಿ ಸೇರಬೇಕಿದ್ದರೆ ಇನ್ನೂ 320 ಕಿ.ಮೀ ನಡೆಯಬೇಕಿದೆ. ಆದರೆ ಅನಿವಾರ್ಯ. ಬೇರೆ ದಾರಿಯಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಬರೇಲಿಯಲ್ಲಿ ಪಿಜಿಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಪ್ರಥಮ ಹಂತದ ಲಾಕ್‌ಡೌನ್ (ಎಪ್ರಿಲ್ 14)ವರೆಗೆ ಹಣವಿತ್ತು. ಬಳಿಕ ಬರಿಗೈಯಲ್ಲಿ ದಿನ ಕಳೆದಿದ್ದಾರೆ. ಊರಿಂದ ಹಣ ಕಳುಹಿಸಲೂ ಕಷ್ಟವಾಗಿದೆ. ಇಬ್ಬರು ವಿದ್ಯಾರ್ಥಿಗಳ ಹೆತ್ತವರು ದಿನಗೂಲಿ ಆಧಾರದಲ್ಲಿ ದುಡಿಯುವವರು. ಲಾಕ್‌ಡೌನ್‌ನಿಂದ ಕೆಲಸವೂ ಇಲ್ಲದೆ ಹಣ ಕಳುಹಿಸುವುದು ಕಷ್ಟ ಎಂದು ತಿಳಿಸಿದ್ದಾರೆ. ಮೇ 3ರಂದೂ ಲಾಕ್‌ಡೌನ್ ಕೊನೆಯಾಗುವ ನಿರೀಕ್ಷೆ ಇಲ್ಲವಾದ್ದರಿಂದ ಕಾಲ್ನಡಿಗೆಯಲ್ಲಿ ಊರಿನತ್ತ ಹೊರಟಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News