ಕೊರೋನ ವೈರಸ್: ದಿಲ್ಲಿ ಏಮ್ಸ್ ನ 40 ಆರೋಗ್ಯಸೇವಾ ಸಿಬ್ಬಂದಿಗೆ ಹೋಂ ಕ್ವಾರಂಟೈನ್

Update: 2020-04-24 18:09 GMT

ಹೊಸದಿಲ್ಲಿ, ಎ.24: ಎಐಐಎಂಎಸ್‌ನ ಗ್ಯಾಸ್ಟ್ರೋಎಂಟರಾಲಜಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷ ನರ್ಸ್‌ಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್ ಸೇರಿದಂತೆ 40 ಸಿಬಂದಿಗಳನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸಲಹೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಐಐಎಂಎಸ್‌ನ ಸಿಬ್ಬಂದಿಗಳ ಕ್ಲಿನಿಕ್‌ಗೆ ಶನಿವಾರ ಕರೆ ಮಾಡಿದ್ದ ನರ್ಸ್ ತನಗೆ ಜ್ವರ ಇರುವುದಾಗಿ ತಿಳಿಸಿದ್ದ. ಸೋಮವಾರ ಪರೀಕ್ಷೆಗೆ ಬರುವಂತೆ ಆತನಿಗೆ ಸೂಚಿಸಲಾಗಿದೆ. ಆದರೆ ಸೋಮವಾರ ಕರ್ತವ್ಯಕ್ಕೆ ಹಾಜರಾಗಬೇಕಿದ್ದರಿಂದ ಬುಧವಾರ ಪರೀಕ್ಷೆಗೆ ಬಂದಿದ್ದಾನೆ. ಬುಧವಾರ ರಾತ್ರಿ ಪೊಸಿಟಿವ್ ವರದಿ ಬಂದಿದೆ. ನರ್ಸ್‌ಗೆ ಸೋಂಕು ತಗುಲಿರುವುದು ದೃಢಪಟ್ಟ ತಕ್ಷಣ ಆತನ ಸಂಪರ್ಕ ಪತ್ತೆ ಕಾರ್ಯ ನಡೆಸಲಾಗಿದೆ ಮತ್ತು ಈತ ಕರ್ತವ್ಯ ನಿರ್ವಹಿಸುತ್ತಿದ್ದ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ 40 ಆರೋಗ್ಯಸೇವಾ ಸಿಬಂದಿಗಳ ಸ್ಯಾಂಪಲನ್ನು ಪರೀಕ್ಷೆಗೆ ರವಾನಿಸಲಾಗಿದೆ. ಇದರಲ್ಲಿ 22 ಸಿಬಂದಿಗಳ ವರದಿಯಲ್ಲಿ ನೆಗೆಟಿವ್ ಬಂದಿದೆ. ಸೋಂಕು ದೃಢಪಟ್ಟಿರುವ ನರ್ಸ್ ಈಗ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News