​ಕೋವಿಡ್-19: ಆರು ಹೊಸ ಲಕ್ಷಣ ಗುರುತಿಸಿದ ಅಮೆರಿಕದ ಉನ್ನತ ವೈದ್ಯಕೀಯ ಸಂಸ್ಥೆ

Update: 2020-04-28 09:58 GMT

ಹೊಸದಿಲ್ಲಿ, ಎ.28: ಚೀನಾದ ವುಹಾನ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿ ಪತ್ತೆಯಾದ ಕೊರೋನವೈರಸ್ ಸೋಂಕು ಇದೀಗ ವಿಶ್ವದ ಬಹುತೇಕ ದೇಶಗಳಿಗೆ ಹಬ್ಬಿದೆ.ಈ ಮೊದಲು ಕೊರೋನ ಸೋಂಕಿತರಲ್ಲಿ ಮೂರು ಲಕ್ಷಣ ಗುರುತಿಸಲಾಗಿತ್ತು. ಸೋಂಕು ಪತ್ತೆಯಾಗಿ ತಿಂಗಳುಗಳು ಕಳೆದ ಬಳಿಕ ಆರು ಹೊಸ ರೋಗ ಲಕ್ಷಣಗಳನ್ನು ವೈದ್ಯಕೀಯ ತಜ್ಞರು ಗುರುತಿಸಿದ್ದಾರೆ.

ಅಮೆರಿಕದ ರೋಗ ನಿಯಂತ್ರಕ ಮತ್ತು ತಡೆಗಟ್ಟುವಿಕೆ ಕೇಂದ್ರವು ಕೊರೋನದ ಆರು ಹೊಸ ಲಕ್ಷಣದ ಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದೆ ಜ್ವರ ಕೆಮ್ಮು ಹಾಗೂ ಉಸಿರಾಟದ ತೊಂದರೆಗಳು ಕೊರೋನದ ಮೂರು ಲಕ್ಷಣಗಳಾಗಿದ್ದವು. ಈಗ ಶೀತ, ಮೈ ನಡುಗುವಿಕೆ, ಸ್ನಾಯು ಸೆಳೆತ, ತಲೆನೋವು, ಗಂಟಲುನೋವು ಮತ್ತು ಹಠಾತ್ತನೆ ರುಚಿ ಹಾಗೂ ವಾಸನೆ ಕಂಡುಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು ಕೋವಿಡ್ 19ನ ಹೊಸ ಲಕ್ಷಣವಾಗಿದೆ.

ಎದೆಯಲ್ಲಿ ನಿರಂತರ ನೋವು ಅಥವಾ ಒತ್ತಡ ಹೊಸ ತರನಾದ ಗೊಂದಲ ಮತ್ತು ಎಚ್ಚರ ತಪ್ಪುವಿಕೆ ಕೊರೋನ್ ವೈರಸ್‌ನ ಮುನ್ಸೂಚನೆಗಳು ಎಂದು ಅಮೆರಿಕದ ರೋಗ ನಿಯಂತ್ರಕ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತಿಳಿಸಿದೆ.

ಕೋವಿಡ್ 19 ಸೋಂಕು ತಗುಲಿರುವ ವ್ಯಕ್ತಿಗಳಲ್ಲಿ ಸೌಮ್ಯ ರೋಗಲಕ್ಷಣಗಳಿಂದ ತೀವ್ರ ಅನಾರೋಗ್ಯದ ತನಕ ವ್ಯಾಪಕವಾದ ರೋಗಲಕ್ಷಣ ಕಂಡುಬಂದಿದೆ. ವೈರಸ್‌ಗೆ ಒಡ್ಡಿಕೊಂಡ ಎರಡರಿಂದ ಹದಿನಾಲ್ಕು ದಿನಗಳ ನಂತರ ಈ ಲಕ್ಷಣ ಕಾಣಿಸಿಕೊಳ್ಳಬಹುದು ಎಂದು ಸಿಡಿಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News