ಕೋವಿಡ್ ಯೋಧರಿಗೆ ರವಿವಾರ ಸಶಸ್ತ್ರ ಪಡೆಗಳಿಂದ ಧನ್ಯವಾದ ಸಲ್ಲಿಕೆ: ಜನರಲ್ ರಾವತ್

Update: 2020-05-01 13:56 GMT

ಹೊಸದಿಲ್ಲಿ, ಮೇ1: ಕೋವಿಡ್-19 ಯೋಧರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ರವಿವಾರ ಸಶಸ್ತ್ರ ಪಡೆಗಳು ಫ್ಲೈ ಪಾಸ್ಟ್‌ಗಳನ್ನು ನಡೆಸಲಿವೆ. ಆಕಾಶದಿಂದ ಆಸ್ಪತ್ರೆಗಳ ಮೇಲೆ ಪುಷ್ಪಗಳ ದಳಗಳನ್ನು ಸುರಿಸಲಿವೆ ಹಾಗೂ ಸಮುದ್ರ ತೀರದಲ್ಲಿ ಹಡಗುಗಳಲ್ಲಿ ಬೆಳಕನ್ನು ಬೆಳಗಿಸಲಿವೆೆ ಎಂದು ಮೂವರು ಸೇನಾ ಮುಖ್ಯಸ್ಥರೊಂದಿಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಮೇ 3ರಂದು ಎಲ್ಲ 3 ಪಡೆಗಳ ವಿಶೇಷ ಕೃತಜ್ಞತೆಯ ಸೂಚಕವಾಗಿ ಕೆಲವು ವಿಶೇಷ ಚಟುವಟಿಕೆಗಳು ನಡೆಯಲಿವೆ. ವಾಯುಪಡೆಯು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಫ್ಲೈ ಪಾಸ್ಟ್‌ಗಳನ್ನು ನಡೆಸಲಿದೆ. ದೇಶದ ಉದ್ದಗಲದಲ್ಲಿ ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಛ್ ತನಕ ಫ್ಲೈ ಪಾಸ್ಟ್ ನಡೆಸಲಾಗುವುದು. ನೌಕೆಪಡೆಯು ಸಮುದ್ರ ಕ್ಕೆ ತೆರಳಿ ಸಮುದ್ರ ತೀರದಲ್ಲಿ ಹಡಗುಗಳನ್ನು ಬೆಳಗಿಸುವ ಮೂಲಕ ತಮ್ಮಶಕ್ತಿಯನ್ನು ಪ್ರದರ್ಶಿಸಲಿದೆ ಎಂದರು.

ರಾಷ್ಟ್ರವು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಆಸ್ಪತ್ರೆಗಳನ್ನು ಗೌರವಿಸಲು ಹೆಲಿಕಾಪ್ಟರ್‌ಗಳು ಆಸ್ಪತ್ರೆಗಳ ಮೇಲೆ ಹೂದಳಗಳನ್ನು ಸುರಿಸಲಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿನ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್‌ಗಳು ಮೊಳಗಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News