ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು 64 ವಿಮಾನ ಕಳುಹಿಸಲು ವಿದೇಶಾಂಗ ಸಚಿವಾಲಯ ಯೋಜನೆ

Update: 2020-05-05 08:35 GMT

ಹೊಸದಿಲ್ಲಿ, ಮೇ 5: ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹಲವು ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ವಿಶ್ವದೆಲ್ಲೆಡೆ ಸಿಲುಕಿರುವ ತನ್ನ ಸಾವಿರಾರು ನಾಗರಿಕರನ್ನು ಕರೆತರುವ ಕಾರ್ಯಾಚರಣೆಗೆ ಭಾರತ ವಾರದಲ್ಲಿ 60ಕ್ಕೂ ಅಧಿಕ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ವಿದೇಶದಲ್ಲಿರುವ ಪ್ರಜೆಗಳನ್ನು ಭಾರತಕ್ಕೆ ಕರೆ ತರುವ ಕಾರ್ಯಾಚರಣೆಯು ಮೇ 7ರಿಂದ ಹಂತಹಂತವಾಗಿ ಆರಂಭವಾಗಲಿದೆ.

ವಿದೇಶಾಂಗ ವ್ಯವಹಾರ ಸಚಿವಾಲಯದ ಯೋಜನೆಯ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್, ಖತರ್, ಸೌದಿ ಅರೇಬಿಯ, ಬಹರೈನ್, ಕುವೈಟ್, ಒಮಾನ್, ಮಲೇಶ್ಯ, ಇಂಗ್ಲೆಂಡ್, ಸಿಂಗಾಪುರ, ಬಾಂಗ್ಲಾದೇಶ,ಫಿಲಿಪ್ಪೈನ್ಸ್ ಹಾಗೂ ಅಮೆರಿಕದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು 64 ವಿಮಾನಗಳನ್ನು ಕಳುಹಿಸಲಾಗುತ್ತದೆ.

ಕೇರಳ ರಾಜ್ಯ ತನ್ನ ನಿವಾಸಿಗಳನ್ನು ಕರೆತರಲು ಗರಿಷ್ಠ 15 ವಿಮಾನಗಳನ್ನು ಕಳುಹಿಸಿಕೊಟ್ಟರೆ, ದಿಲ್ಲಿ-ಎನ್‌ಸಿಆರ್ ಹಾಗೂ ತಮಿಳುನಾಡು ತಲಾ 11 ವಿಮಾನಗಳನ್ನು, ಮಹಾರಾಷ್ಟ್ರ ಹಾಗೂ ತೆಲಂಗಾಣ ತಲಾ 7, ಗುಜರಾತ್ 3, ಜಮ್ಮು-ಕಾಶ್ಮೀರ ಹಾಗೂ ಕರ್ನಾಟಕ ತಲಾ 3, ಪಂಜಾಬ್ ಹಾಗೂ ಉತ್ತರಪ್ರದೇಶ ತಲಾ ಒಂದು ವಿಮಾನವನ್ನು ಕಳುಹಿಸಿಕೊಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News