ಜಮ್ಮು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪ್ರತಿಷ್ಠಿತ ‘ಪುಲಿಟ್ಝರ್’ ಪ್ರಶಸ್ತಿ

Update: 2020-05-05 09:47 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ ಅಲ್ಲಿನ ಜನಜೀವನದ ಸಂಕಷ್ಟಗಳನ್ನು ಕಣ್ಣಿಗೆ ಕಟ್ಟುವಂತಹ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿದ  ಅಸೋಸಿಯೇಟೆಡ್ ಪ್ರೆಸ್ ಛಾಯಾಗ್ರಾಹಕರಾದ ದರ್ ಯಾಸೀನ್, ಮುಖ್ತಾರ್ ಖಾನ್ ಹಾಗೂ ಚನ್ನಿ ಆನಂದ್ ಅವರು 2020ರ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಗೆದ್ದಿದ್ದಾರೆ.

ಕೊರೋನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಣೆಯನ್ನು ಮುಂದೂಲಾಗಿತ್ತು. ಪತ್ರಿಕೋದ್ಯಮದ ಈ ಪ್ರತಿಷ್ಠಿತ ಪ್ರಶಸ್ತಿ ವಿಜೇತರುಗಳ ಹೆಸರುಗಳನ್ನು ಈ ಪ್ರಶಸ್ತಿ ನೀಡುವ ಸಂಸ್ಥೆಯ ಡಾನಾ ಕೆನಡಿ ಅವರು ತಮ್ಮ ಮನೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಘೋಷಿಸಿದರು. ಸಾಮಾನ್ಯವಾಗಿ ನ್ಯೂಯಾರ್ಕ್‍ ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಈ ಪ್ರಶಸ್ತಿ ಘೋಷಣೆ ಮಾಡಲಾಗುತ್ತಿತ್ತು.

ಜಮ್ಮು ಕಾಶ್ಮೀರದಲ್ಲಿನ ಪ್ರತಿಭಟನೆಗಳು, ಪೊಲೀಸ್, ಅರೆ ಸೇನಾ ಪಡೆಗಳ ನಿಯೋಜನೆ, ಫೋನ್ ಹಾಗೂ ಅಂತರ್ಜಾಲ ಸೇವೆ ಕಡಿತಗೊಂಡ ನಂತರ ಅಲ್ಲಿನ ಜನಜೀವನ ಕುರಿತಾದ ಮನೋಜ್ಞ ಛಾಯಾಚಿತ್ರಗಳನ್ನು ಅವರು ಸೆರೆ ಹಿಡಿದಿದ್ದರು.

[Photo: Mukhtar Khan/AP]

[Photo: Channi Anand/AP]

[Photo: Dar Yasin/AP]

ಯಾಸೀನ್ ಹಾಗೂ ಖಾನ್ ಅವರು ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಆನಂದ್ ಅವರು ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತ್ತಾರೆ.

ರಾಯ್ಟರ್ಸ್ ಪತ್ರಕರ್ತರಾದ  ಟೈರೋನ್ ಸಿಯು, ಅದ್ನಾನ್ ಅಬಿದಿ, ಅಮ್ಮರ್ ಅವದ್, ಅನುಶ್ರೀ ಫಡ್ನವಿಸ್, ವಿಲ್ಲಿ ಕುರ್ನಿಯಿವನ್, ಲಿಯಾ ಮಿಲ್ಲಿಸ್, ಅತಿತ್ ಪೆರವೊಂಗ್ಮೆತ, ಥಾಮಸ್ ಪೀಟರ್, ಕೈ ಪ್ಫೆಪ್ಫೆನ್ಬಚ್, ಜಾರ್ಜ್ ಸಿಲ್ವಾ ಹಾಗೂ ಸುಸಾನ ವೇರ ಅವರು ಕಳೆದ ವರ್ಷ ಹಾಂಕಾಂಗ್‍ನಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಗಳ ಸಂದರ್ಭ ತೆಗೆದ ಛಾಯಾಚಿತ್ರಗಳಿಗಾಗಿ ಬ್ರೇಕಿಂಗ್ ನ್ಯೂಸ್ ಫೋಟೋಗ್ರಾಫಿ ವಿಭಾಗದಲ್ಲಿ  ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News