69 ಶೇ.!: ಜಗತ್ತಿನಲ್ಲೇ ಇಂಧನದ ಮೇಲೆ ಅತ್ಯಧಿಕ ತೆರಿಗೆ ವಿಧಿಸಿದ ದೇಶ ಭಾರತ

Update: 2020-05-06 14:54 GMT

ಹೊಸದಿಲ್ಲಿ: ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‍ ಗೆ 13 ರೂ.ಗಳಷ್ಟು ಹಾಗೂ ಪೆಟ್ರೋಲ್ ಮೇಲಿನ ತೆರಿಗೆಯನ್ನು ಲೀಟರ್‍ಗೆ ರೂ. 10ರಷ್ಟು ಕೇಂದ್ರ ಸರಕಾರ ಕಳೆದ ರಾತ್ರಿ ಏರಿಸುವ ಮೂಲಕ ಭಾರತ ವಿಶ್ವದಲ್ಲೇ ಇಂಧನದ ಮೇಲೆ ಗರಿಷ್ಠ ತೆರಿಗೆ ವಿಧಿಸಿದ ದೇಶವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್‍ಗೆ ರಸ್ತೆ ತೆರಿಗೆಯನ್ನು ರೂ. 8ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದ ಸರಕಾರ ಅದರ ಹೊರತಾಗಿ ಹೆಚ್ಚುವರಿ ಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್‍ಗೆ ರೂ 2 ಹಾಗೂ ರೂ 5ರಷ್ಟು ಏರಿಕೆ ಮಾಡಿದೆ. ಮಂಗಳವಾರ ದಿಲ್ಲಿ ಸರಕಾರ ಕೂಡ ತನ್ನ ಪಾಲಿನ ವ್ಯಾಟ್ ಏರಿಕೆ ಮಾಡಿ  ಪೆಟ್ರೋಲ್ ಮೇಲಿನ ವ್ಯಾಟ್ ಲೀಟರ್‍ಗೆ ರೂ 1.6ರಷ್ಟು ಏರಿಸಿದ್ದರೆ ಡೀಸೆಲ್ ಮೇಲಿನ ವ್ಯಾಟ್ ರೂ 7.1ರಷ್ಟು ಏರಿಸಿದೆ.

ಇದರೊಂದಿಗೆ ಬಂಕ್‍ಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಈ ಎರಡು ಇಂಧನಗಳ ಬೆಲೆಯಲ್ಲಿ ಶೇ 69ರಷ್ಟು ತೆರಿಗೆಗಳೇ ಅಡಕವಾದಂತಾಗಿದೆ. ಇಂಧನದ ಮೇಲೆ ಶೇ 60ಕ್ಕೂ ಅಧಿಕ  ತೆರಿಗೆ ವಿಧಿಸುವ ಇತರ ದೇಶಗಳೆಂದರೆ ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಬ್ರಿಟನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News