ಇಲ್ಲಿನ ರಾಜ್ಯ ಸರಕಾರದಿಂದ ಗ್ರಾಹಕರ ಮನೆಬಾಗಿಲಿಗೆ ಮದ್ಯ ಪೂರೈಕೆ !
Update: 2020-05-06 14:32 GMT
ಚಂಡಿಗಡ,ಮೇ 6: ಕರ್ಫ್ಯೂ ಮತ್ತು ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಸುರಕ್ಷಿತ ಅಂತರ ನಿಯಮದ ಉಲ್ಲಂಘನೆಯನ್ನು ತಡೆಯುವ ಪ್ರಯತ್ನವಾಗಿ ಪಂಜಾಬ್ ಸರಕಾರವು ಗ್ರಾಹಕರ ಮನೆಬಾಗಿಲಿಗೇ ಮದ್ಯವನ್ನು ಪೂರೈಸಲು ನಿರ್ಧರಿಸಿದ್ದು,ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಅಬಕಾರಿ ಇಲಾಖೆಯು ಬಿಡುಗಡೆಗೊಳಿಸಿದೆ.
ಈಗ ಗುಂಪಿನಲ್ಲಿ ಇಬ್ಬರು ಮಾತ್ರ ಅಧಿಕೃತ ಪಾಸ್‌ನೊಂದಿಗೆ ಮನೆಬಾಗಿಲಿಗೆ ಮದ್ಯ ಪೂರೈಸಲು ಅವಕಾಶ ನೀಡಲಾಗಿದೆ. ಮದ್ಯಪೂರೈಕೆಗೆ ಮಿತಿ ಹೇರಲಾಗಿದ್ದು,ಒಂದು ಮನೆಗೆ ಎರಡು ಲೀ.ಗಿಂತ ಹೆಚ್ಚು ಮದ್ಯವನ್ನು ವಿತರಿಸಲಾಗುವುದಿಲ್ಲ.
ಮದ್ಯದಂಗಡಿಗಳು ಗ್ರಾಹಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕಿದ್ದು,ಅಂಗಡಿಯ ಹೊರಗೆ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.