ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ 25,000 ಖಾಸಗಿ ವೈದ್ಯರ ಮೊರೆ ಹೋದ ಮಹಾರಾಷ್ಟ್ರ

Update: 2020-05-07 05:35 GMT

ಮುಂಬೈ, ಮೇ 7: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ತಾವೂ ಕೂಡ ತಕ್ಷಣವೇ ಕೈಜೋಡಿಸಬೇಕೆಂದು ಮುಂಬೈನಲ್ಲಿರುವ 25,000 ಖಾಸಗಿ ವೈದ್ಯರನ್ನು ಮಹಾರಾಷ್ಟ್ರ ಸರಕಾರ ಕೇಳಿಕೊಂಡಿದೆ. ವೈದ್ಯರಿಗೆ ರಕ್ಷಣಾ ಕಿಟ್‌ಗಳ ಪೂರೈಕೆ ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸಿದ್ದಕ್ಕೆ ವೇತನವನ್ನು ನೀಡಲಾಗುವುದು ಎಂದು ರಾಜ್ಯ ಸರಕಾರದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನ ನಿರ್ದೇಶನಾಲಯ ಸೂಚನೆ ಪತ್ರದಲ್ಲಿ ತಿಳಿಸಿದೆ.

 ಕೊರೋನ ವೈರಸ್ ಕಾಣಿಸಿಕೊಂಡ ಬಳಿಕ ನಗರದೆಲ್ಲೆಡೆ ಹೆಚ್ಚಿನ ಖಾಸಗಿ ಕ್ಲಿನಿಕ್‌ಗಳು ಮುಚ್ಚಿವೆ. ಕೋವಿಡ್-19 ರೋಗಿಗಳಿಗೆ ತಾತ್ಕಾಲಿಕ ಐಸೋಲೇಶನ್ ಹಾಗೂ ಕ್ವಾರಂಟೈನ್ ಸೆಂಟರ್‌ಗಳನ್ನು ನಿರ್ಮಿಸಿರುವ ಸರಕಾರ ಖಾಸಗಿ ವೈದ್ಯರ ಸೇವೆಯನ್ನು ಬಳಸಿಕೊಳ್ಳಲು ಬಯಸಿದೆ. 55 ಕ್ಕಿಂತ ಹೆಚ್ಚಿನ ವಯಸ್ಸಿನ ವೈದ್ಯರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಕನಿಷ್ಠ 15 ದಿನಗಳ ಕಾಲ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಹಾಗೂ ಈ ರೋಗ ಬಾರದಂತೆ ತಡೆಯಲು ನಿಮ್ಮಂತಹ ತಜ್ಞರ ಸೇವೆ ಅಗತ್ಯವಿದೆ ಎಂದು ಸರಕಾರ ಖಾಸಗಿ ವೈದ್ಯರಿಗೆ ತಿಳಿಸಿದೆ.

 "ಇಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ವೈದ್ಯರ ನೆರವಿನ ಅಗತ್ಯವಿದೆ ಎಂದ ಸರಕಾರದ ಹೇಳಿಕೆಯನ್ನು ನಾನು ಅರ್ಥಮಾಡಿಕೊಳ್ಳುವೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವೈದ್ಯರು ನಮ್ಮ ಜನರೊಂದಿಗೆ ನಿಲ್ಲುತ್ತಾರೆ. ಕೋವಿಡ್‌ಯೇತರ ರೋಗಿಗಳು ಲಾಕ್‌ಡೌನ್‌ನಿಂದ ಈಗಾಗಲೇ ಸದ್ದಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ.ನಾವೀಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾದರೆ ಕೋವಿಡ್‌ರಹಿತ ರೋಗಿಗಳು ನಮ್ಮ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ'' ಎಂದು ಡಾ.ರಾಜೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News