ಜೂನ್ 30ರ ತನಕ ಬುಕ್ ಮಾಡಿರುವ ರೈಲು ಟಿಕೆಟ್‌ಗಳು ರದ್ದು

Update: 2020-05-14 05:43 GMT

ಹೊಸದಿಲ್ಲಿ,ಮೇ 14: ಜೂನ್ 30ರ ತನಕ ಬುಕ್ ಮಾಡಲಾಗಿರುವ ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಉಪನಗರ ಸೇವೆಗಳು ಸೇರಿದಂತೆ ನಿಯಮಿತ ಪ್ರಯಾಣಿಕರ ಸೇವೆಯ ಎಲ್ಲ ಟಿಕೆಟ್‌ಗಳನ್ನು ಭಾರತೀಯ ರೈಲ್ವೇ ರದ್ದುಪಡಿಸಿದೆ.

ಸಂಪೂರ್ಣ ಮರು ಪಾವತಿಯನ್ನು ಎಲ್ಲ ಪ್ರಯಾಣಿಕರಿಗೆ ನೀಡಲಾಗುವುದು ಎಂದು ಗುರುವಾರ ಬಿಡುಗಡೆ ಮಾಡಿರುವ ಪ್ರಕಟನೆಯೊಂದರಲ್ಲಿ ರೈಲ್ವೇಸ್ ತಿಳಿಸಿದೆ.

ಶ್ರಮಿಕ್(ಕಾರ್ಮಿಕರ)ರೈಲುಗಳು ಸಿಲುಕಿಹಾಕಿಕೊಂಡಿರುವ ಕಾರ್ಮಿಕರನ್ನು ಪ್ರತಿದಿನ ಅವರ ಊರಿಗೆ ತಲುಪುವ ಕೆಲಸವನ್ನು ಮಾಡಲಿದೆ.ಈ ವಾರ ದಿಲ್ಲಿ ಹಾಗೂ 15 ಪ್ರಮುಖ ನಿಲ್ದಾಣಗಳ ನಡುವೆ ಓಡುತ್ತಿರುವ ವಿಶೇಷ ಪ್ಯಾಸೆಂಜರ್ ರೈಲುಗಳು ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರಿಸಲಿವೆ ಎಂದು ರೈಲ್ವೇಸ್ ತಿಳಿಸಿದೆ.

ಲಾಕ್‌ಡೌನ್ ಜಾರಿಗೆ ಮೊದಲು ಬುಕ್ ಮಾಡಿ ಬಳಿಕ ರದ್ದಾಗಿರುವ 94 ಲಕ್ಷ ಟಿಕೆಟ್‌ಗಳ ಸುಮಾರು 1,490 ಕೋ.ರೂ.ವನ್ನು ರೈಲ್ವೇಸ್ ಮರುಪಾವತಿ ಮಾಡಿದೆ. ಲಾಕ್‌ಡೌನ್‌ನ ಮೊದಲ ಹಂತವಾದ ಮಾರ್ಚ್ 22ರಿಂದ ಎಪ್ರಿಲ್ 14ರ ತನಕ ಪ್ರಯಾಣಿಲು ಯೋಜನೆ ಮಾಡಿರುವವರ 830. ಕೋ.ರೂ.ವನ್ನು ಮರುಪಾವತಿ ಮಾಡಲಾಗಿದೆ ಎಂದು ಕಳೆದ ತಿಂಗಳು ಸುದ್ದಿಸಂಸ್ಥೆ ಪಿಟಿಐ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News