ಕೇಂದ್ರ ಕಳುಹಿಸಿದ 'ಕಳಪೆ ಗುಣಮಟ್ಟದ' 45 ಟನ್ ಧಾನ್ಯವನ್ನು ವಾಪಸ್ ಕಳುಹಿಸಿದ ಪಂಜಾಬ್ ಸರಕಾರ

Update: 2020-05-15 12:29 GMT
Photo: indianexpress.com

ಚಂಡೀಗಢ:  ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ ಅನ್ವಯ ಆಹಾರಧಾನ್ಯ ವಿತರಣೆ ಕುರಿತು ಕೇಂದ್ರ ಮತ್ತು ಪಂಜಾಬ್ ಸರಕಾರದ ನಡುವೆ ಜಟಾಪಟಿ ನಡೆದ ಕೆಲವೇ ದಿನಗಳ ನಂತರ ಕೇಂದ್ರ ಸರಬರಾಜು ಮಾಡಿದ್ದ ಕನಿಷ್ಠ 45 ಮೆಟ್ರಿಕ್ ಟನ್ ಕಪ್ಪು ಮಸೂರ ಕಳಪೆ ಗುಣಮಟ್ಟದ್ದಾಗಿದೆ ಎಂದು ಹೇಳಿ ಅದನ್ನು ರಾಜ್ಯ ಸರಕಾರ ವಾಪಸ್ ಕಳುಹಿಸಿದೆ. ಈ ಬೇಳೆಯಲ್ಲಿ ಹಕ್ಕಿಗಳ ಹಿಕ್ಕೆ, ಫಂಗಸ್ ಇದೆ ಹಾಗೂ ಅದು ಕೆಟ್ಟ ವಾಸನೆಯಿಂದ ಕೂಡಿದೆ ಎಂಬ ದೂರನ್ನೂ ಪಂಜಾಬ್ ಸರಕಾರ ಮಾಡಿದೆ.

ಕೇಂದ್ರ ಸರಬರಾಜು ಮಾಡಿದ ಈ ಆಹಾರ ಧಾನ್ಯವನ್ನು ಫಲಾನುಭವಿಗಳಿಗೆ ವಿತರಿಸಿದ ನಂತರ ಹಲವರು ದೂರಿದ್ದು, ನಂತರ ಅವುಗಳನ್ನು ಪಂಜಾಬ್ ರಾಜ್ಯದ ಮೊಹಾಲಿ ಜಿಲ್ಲೆಯ ಫಲಾನುಭವಿಗಳಿಂದ ವಾಪಸ್ ಪಡೆದು ಕೇಂದ್ರಕ್ಕೆ ವಾಪಸ್ ಕಳುಹಿಸಿಕೊಡಲಾಗಿದೆ.

ಆಹಾರ ಧಾನ್ಯದ ಗುಣಮಟ್ಟ ಪರಿಶೀಲಿಸದೆ ಅದನ್ನು ಪಡೆದು ವಿತರಿಸಿದ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ತನಿಖೆಗೂ ಪಂಜಾಬ್ ಸರಕಾರ ಆದೇಶಿಸಿದೆ.

ರಾಜ್ಯದ 1.4 ಕೋಟಿ ಫಲಾನುಭವಿಗಳಿಗೆ 10,800 ಮೆಟ್ರಿಕ್ ಟನ್ ಧಾನ್ಯ ಮಂಜೂರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News