ಕೋವಿಡ್-19:24 ಗಂಟೆಗಳಲ್ಲಿ ದೇಶದಲ್ಲಿ 3,970 ಹೊಸ ಪ್ರಕರಣಗಳು, 103 ಸಾವುಗಳು ವರದಿ

Update: 2020-05-16 18:03 GMT

ಹೊಸದಿಲ್ಲಿ, ಮೇ 16: ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್ ಸೋಂಕಿನಿಂದ 103 ಸಾವುಗಳು ಸಂಭವಿಸಿದ್ದು, ಇದರೊಂದಿಗೆ ಒಟ್ಟು ಸಾವುಗಳ ಸಂಖ್ಯೆ 2,752ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶನಿವಾರ ತಿಳಿಸಿದೆ. ಇದೇ ಅವಧಿಯಲ್ಲಿ 3,970 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ದೇಶಾದ್ಯಂತ ಸೋಂಕಿತರ ಸಂಖ್ಯೆಯು 85,940ಕ್ಕೇರಿದೆ. ಈ ಪೈಕಿ 53,035 ಪ್ರಕರಣಗಳು ಸಕ್ರಿಯವಾಗಿದ್ದು, 30,153 ಜನರು ಗುಣಮುಖರಾಗಿದ್ದಾರೆ ಮತ್ತು 2,752 ಜನರು ಸಾವನ್ನಪ್ಪಿದ್ದಾರೆ. ಒಟ್ಟು ದೃಢೀಕೃತ ಪ್ರಕರಣಗಳಲ್ಲಿ ವಿದೇಶಿಯರೂ ಸೇರಿದ್ದಾರೆ.

ಗರಿಷ್ಠ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ದೇಶದ ಅತ್ಯಂತ ಬಾಧಿತ ರಾಜ್ಯವಾಗಿ ಮುಂದುವರಿದಿದೆ.

ಶುಕ್ರವಾರ ಬೆಳಿಗ್ಗೆಯಿಂದ ವರದಿಯಾಗಿರುವ 103 ಸಾವುಗಳ ಪೈಕಿ 49 ಮಹಾರಾಷ್ಟ್ರದಲ್ಲಿ,20 ಗುಜರಾತಿನಲ್ಲಿ,10 ಪ.ಬಂಗಾಳದಲ್ಲಿ,ಎಂಟು ದಿಲ್ಲಿಯಲ್ಲಿ, ಏಳು ಉತ್ತರ ಪ್ರದೇಶದಲ್ಲಿ, ಐದು ತಮಿಳುನಾಡಿನಲ್ಲಿ,ಎರಡು ಮಧ್ಯಪ್ರದೇಶದಲ್ಲಿ ಹಾಗೂ ತಲಾ ಒಂದು ಸಾವು ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿವೆ.

ಶನಿವಾರದ ಅಂಕಿಅಂಶಗಳಂತೆ ಮಹಾರಾಷ್ಟ್ರದಲ್ಲಿ 29,100 ದೃಢೀಕೃತ ಪ್ರಕರಣಗಳಿದ್ದು,ಇದು ದೇಶದಲ್ಲಿ ಗರಿಷ್ಠವಾಗಿದೆ.ನಂತರದ ಸ್ಥಾನಗಳಲ್ಲಿ ತಮಿಳುನಾಡು (10,108),ಗುಜರಾತ್ (9,931) ಮತ್ತು ದಿಲ್ಲಿ (8,895),ರಾಜಸ್ಥಾನ(4,727),ಮಧ್ಯಪ್ರದೇಶ (4,595),ಉತ್ತರ ಪ್ರದೇಶ (4,057),ಪ.ಬಂಗಾಳ (2,461) ರಾಜ್ಯಗಳಿವೆ. ಇತರ ರಾಜ್ಯಗಳಲ್ಲಿ ದೃಢೀಕೃತ ಪ್ರಕರಣಗಳ ಸಂಖ್ಯೆ ಇನ್ನೂ 2,000 ದಾಟಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News