ಕಾಂಗ್ರೆಸ್ ಕಳುಹಿಸಿದ ಬಸ್‍ ಗಳ ಪಟ್ಟಿಯಲ್ಲಿ ಸ್ಕೂಟರ್, ಆಟೋಗಳ ನೋಂದಣಿ ಸಂಖ್ಯೆ: ಉ.ಪ್ರ. ಸಚಿವರ ಆರೋಪ

Update: 2020-05-19 11:21 GMT

ಲಕ್ನೋ: ವಲಸಿಗ ಕಾರ್ಮಿಕರಿಗೆ ತಮ್ಮ ಮನೆಗಳನ್ನು ತಲುಪಲು 1000 ಬಸ್‍ಗಳ ಏರ್ಪಾಟು ಮಾಡುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಆಫರ್ ಅನ್ನು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಒಪ್ಪಿಕೊಂಡ ಬೆನ್ನಲ್ಲೇ ಮಂಗಳವಾರ ರಾಜ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅಚ್ಚರಿಯ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿರುವ ಬಸ್‍ಗಳ ನೋಂದಣಿ ಸಂಖ್ಯೆಗಳಲ್ಲಿ ಸ್ಕೂಟರ್, ತ್ರಿಚಕ್ರ ವಾಹನಗಳು ಹಾಗೂ ಗೂಡ್ಸ್ ವಾಹನಗಳ ನೋಂದಣಿ ಸಂಖ್ಯೆಗಳಿವೆ ಎಂದು ಅವರು ದೂರಿದ್ದಾರೆ.

 “ಆರಂಭಿಕ ಪರಿಶೀಲನೆ ನಡೆಸಿದಾಗ ನೀಡಲಾದ ನೋಂದಣಿ ಸಂಖ್ಯೆಯಲ್ಲಿ ಸ್ಕೂಟರ್‍ಗಳು, ತ್ರಿಚಕ್ರ ವಾಹನಗಳು ಹಾಗೂ ಗೂಡ್ಸ್ ಕ್ಯಾರಿಯರ್ ಸಂಖ್ಯೆಗಳು ಕಂಡುಬಂದಿವೆ'' ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರ `ಫರ್ಝಿವಾದ' ಆಗಿದೆ ಎಂದು ಆರೋಪಿಸಿದ  ಸಿಂಗ್, ಅವರಿಗೆ ವಲಸಿಗ ಕಾರ್ಮಿಕರ ಬಗ್ಗೆ ಅನುಕಂಪವಿಲ್ಲ, ಅವರಿಗೆ ಈ ವಿಷಯವನ್ನು ರಾಜಕೀಯಗೊಳಿಸುವುದಷ್ಟೇ ಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News