ದೇಶಿಯ ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯವಲ್ಲ

Update: 2020-05-24 06:15 GMT

ಹೊಸದಿಲ್ಲಿ,ಮೇ 24: ಸೋಮವಾರದಿಂದ ಆರಂಭಗೊಳ್ಳಲಿರುವ ದೇಶಿಯ ವಿಮಾನಯಾನಗಳ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ನ್ನು ಹೊಂದಿರುವುದು ಕಡ್ಡಾಯವಲ್ಲ ಎಂದು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯವು ಸ್ಪಷ್ಟನೆಯನ್ನು ನೀಡಿದೆ. ಆದರೆ ಇಂತಹ ಪ್ರಯಾಣಿಕರು ವಿಮಾನವನ್ನು ಹತ್ತುವ ಮುನ್ನ ತಮ್ಮ ಪ್ರಯಾಣ ಇತಿಹಾಸ ಮತ್ತು ಆರೋಗ್ಯ ಸ್ಥಿತಿ ಕುರಿತು ವಿವರಗಳೊಂದಿಗೆ ಘೋಷಣಾ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

 ದೇಶಿಯ ವಿಮಾನಯಾನಗಳಿಗಾಗಿ ಸಚಿವಾಲಯವು ಕೆಲವೊಂದು ನಿಯಮಗಳನ್ನು ಪ್ರಕಟಿಸಿದ್ದು,ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ನ್ನು ಹೊಂದಿರಬೇಕು ಮತ್ತು ಅದು ಹಸಿರು ಪಟ್ಟಿಯನ್ನು ತೋರಿಸುವ ಪ್ರಯಾಣಿಕರಿಗೆ ಮಾತ್ರ ವಿಮಾನವೇರಲು ಅವಕಾಶ ನೀಡಲಾಗುತ್ತದೆ ಎನ್ನುವುದು ಇವುಗಳಲ್ಲೊಂದಾಗಿತ್ತು. ಆದರೆ ಸ್ಮಾರ್ಟ್ ಫೋನ್‌ಗಳನ್ನು ಬಳಸದ ,ಫೋನ್‌ಗಳನ್ನೇ ಬಳಸದ ಪ್ರಯಾಣಿಕರೂ ಇದ್ದಾರೆ ಅಥವಾ ಯಾವುದೋ ಕಾರಣಕ್ಕೆ ಅರೋಗ್ಯ ಸೇತು ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳದವರೂ ಇದ್ದಾರೆ. ಹೀಗಾಗಿ ಸರಕಾರದ ಈ ನಿಯಮವು ಗೊಂದಲವನ್ನು ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News