ರಾಜ್ಯಸಭೆ ಚುನಾವಣೆ: ಬಿಜೆಪಿಗೆ 9 ಸ್ಥಾನ ಹೆಚ್ಚಳ ಸಾಧ್ಯತೆ

Update: 2020-06-09 03:59 GMT

ಹೊಸದಿಲ್ಲಿ, ಜೂ.9: ಕಳೆದ ಮಾರ್ಚ್‌ನಲ್ಲಿ ರಾಜ್ಯಸಭೆ ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ತನ್ನ ಸದಸ್ಯಬಲವನ್ನು 81ರಿಂದ 75ಕ್ಕೆ ಕುಗ್ಗಿಸಿಕೊಂಡಿದ್ದ ಬಿಜೆಪಿಗೆ ಜೂನ್ 19ರಂದು ನಡೆಯುವ ಚುನಾವಣೆಯಲ್ಲಿ ಒಂಬತ್ತು ಸ್ಥಾನ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಚುನಾವಣೆ ಬಳಿಕ ಎನ್‌ಡಿಎ ಸದಸ್ಯಬಲ 100ಕ್ಕೇರಲಿದ್ದು, ವಿಧೇಯಕಗಳನ್ನು ಅಂಗೀಕರಿಸಲು ಬೇಕಾದ ಸಂಖ್ಯೆಗೆ ಕೇವಲ 22 ಸದಸ್ಯರ ಕೊರತೆ ಕಾಡಲಿದೆ. ರಾಜ್ಯಸಭೆಯ ಒಟ್ಟು ಸದಸ್ಯಬಲ 242. ಆದಾಗ್ಯೂ ಮಳೆಗಾಲದ ಅಧಿವೇಶನಕ್ಕೆ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತದ ಕೊರತೆಯಾಗದು. ಏಕೆಂದರೆ ನಾಲ್ವರು ನಾಮನಿರ್ದೇಶಿತ ಸದಸ್ಯರ ಜತೆಗೆ ಎಐಎಡಿಎಂಕೆ, ಬಿಜೆಡಿ, ವೈಎಸ್‌ಆರ್‌ಸಿಪಿ ಹಾಗೂ ಟಿಆರ್‌ಎಸ್‌ನಂಥ ಮಿತ್ರಪಕ್ಷಗಳ ಬೆಂಬಲ ಎನ್‌ಡಿಗೆ ಲಭ್ಯವಾಗಲಿದೆ.

ರಾಜ್ಯಸಭೆಯ 24 ಸ್ಥಾನಗಳಿಗೆ 19ರಂದು ಚುನಾವಣೆ ನಡೆಯಲಿದ್ದು, ಈ ಪೈಕಿ 18 ಸ್ಥಾನಗಳ ಚುನಾವಣೆ ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟಿತ್ತು. ಉಳಿದ ಆರು ಸ್ಥಾನಗಳು ಮುಂದಿನ 40 ದಿನದೊಳಗೆ ಖಾಲಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News