ಸತತ 2ನೇ ದಿನ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಅಧಿಕ

Update: 2020-06-11 07:47 GMT

 ಹೊಸದಿಲ್ಲಿ,ಜೂ.11: ಇದೇ ಮೊದಲ ಬಾರಿ ದೇಶದಲ್ಲಿ ಕೋವಿಡ್-19 ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖರಾದವರ ಸಂಖ್ಯೆ ಹೆಚ್ಚು ಕಂಡುಬರುತ್ತಿದ್ದು, ಇದು ಸತತ ಎರಡನೇ ದಿನವಾದ ಗುರುವಾರವೂ ಮುಂದುವರಿದಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ದೇಶದಲ್ಲಿ ಪ್ರತಿನಿತ್ಯವೂ 10 ಸಾವಿರ ಸಮೀಪದಷ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಒಟ್ಟು ಸೋಂಕಿತ ಸಂಖ್ಯೆ 2.86 ಲಕ್ಷ ತಲುಪಿದೆ. ಕಳೆದ 24 ಗಂಟೆಗಳಲ್ಲಿ 357 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8,102ಕ್ಕೆ ತಲುಪಿದೆ.

ಗುರುವಾರದ ದತ್ತಾಂಶಗಳ ಪ್ರಕಾರ ಒಟ್ಟು ಪ್ರಕರಣಗಳ ಪೈಕಿ 1,37,448 ಸಕ್ರಿಯ ಪ್ರಕರಣಗಳಿವೆ. ಗುಣಮುಖರಾದವರ ಸಂಖ್ಯೆ 1,41,028 ಇದೆ. ಸುಮಾರು ಶೇ.48.99ರಷ್ಟು ರೋಗಿಗಳು ಸೋಂಕು ನಿವಾರಿಸಿಕೊಂಡು ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಗುರುವಾರ ಒಟ್ಟಾರೆ 2,86,579 ಪ್ರಕರಣಗಳಿದ್ದು, 8,102 ಮಂದಿ ಮೃತಪಟ್ಟಿದ್ದಾರೆ. ಹೆಚ್ಚು ಜನರು ಕೋವಿಡ್‌ನಿಂದ ಗುಣಮುಖರಾಗುತ್ತಿದ್ದಾರೆ ಎಂಬುದು ಈ ದತ್ತಾಂಶಗಳಿಂದ ಸ್ಷಷ್ಟಗೊಂಡಿದೆ ಎಂದು ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ನೀರಜ್ ಗುಪ್ತಾ ತಿಳಿಸಿದ್ದಾರೆ. ಜಾಗತಿಕ ಟ್ರೆಂಡ್ ಪ್ರಕಾರ ಶೇ.80ರಷ್ಟು ಜನರು ಕಡಿಮೆ ತೀವ್ರತೆಯ ಸೋಂಕು ಹೊಂದಿದ್ದಾರೆ. ಇವರೆಲ್ಲರೂ ಶೇ.100ರಷ್ಟು ಗುಣಮುಖರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News