ಆರು ಆಸ್ಪತ್ರೆಗಳಿಂದ ಚಿಕಿತ್ಸೆ ನಿರಾಕರಿಸಲ್ಪಟ್ಟ ಕೋವಿಡ್ ಲಕ್ಷಣ ಹೊಂದಿದ್ದ ದಿಲ್ಲಿ ವಿವಿ ಪ್ರೊಫೆಸರ್ ನಿಧನ

Update: 2020-06-12 12:49 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್-19 ಲಕ್ಷಣಗಳನ್ನು ಹೊಂದಿದ್ದ ದಿಲ್ಲಿ ವಿಶ್ವವಿದ್ಯಾಲಯದ ಅರಬಿಕ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವಾಲಿ ಅಖ್ತರ್ ನದ್ವಿ ಅವರನ್ನು ದಿಲ್ಲಿ ಹಾಗೂ ನೊಯ್ಡಾದ ಆರು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ನಿರಾಕರಿಸಿದ ನಂತರ ಅವರು ಜೂನ್ 9ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ

ಜೂನ್ 2ರಂದು ಅಖ್ತರ್ ಅವರಿಗೆ ಜ್ವರ ಕಾಡಲಾರಂಭಿಸಿದಾಗ ಅವರ ಕುಟುಂಬ ದಿಲ್ಲಿಯ ಬನ್ಸಾಲ್ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ಹೋಲಿ ಫ್ಯಾಮಿಲಿ ಆಸ್ಪತ್ರೆ, ಮೂಲ್‍ಚಂದ್ ಆಸ್ಪತ್ರೆ ಹಾಗೂ ನೊಯ್ಡಾದ ಕೈಲಾಶ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದರೂ ಪ್ರೊಫೆಸರ್ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದವು. ಜ್ವರ ಇರುವವರನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಕೆಲ ಆಸ್ಪತ್ರೆಗಳು ಹೇಳಿದ್ದರೆ ಇನ್ನು ಕೆಲವು ಆಸ್ಪತ್ರೆಗಳು ತಮ್ಮಲ್ಲಿ ಬೆಡ್ ಇಲ್ಲ ಎಂದು ಕಾರಣ ನೀಡಿದ್ದವು ಎಂದು ಆರೋಪಿಸಲಾಗಿದೆ.

ಪ್ರೊಫೆಸರ್ ಅವರ ನಿವಾಸದ ಹತ್ತಿರದಲ್ಲಿಯೇ ಇರುವ ಆಸ್ಪತ್ರೆಗಳು ದಿಲ್ಲಿ ವಿವಿ ಜತೆ ಚಿಕಿತ್ಸೆಗಾಗಿ ನೇರ ನಗದು ಪಾವತಿಗೆ ಹೊಂದಾಣಿಕೆ ಹೊಂದಿದ್ದರೂ ಅಲ್ಲಿಯೂ ಅವರನ್ನು ದಾಖಲಿಸಲು ಸಾಧ್ಯವಾಗಿಲ್ಲ, ಇದು ಅವರಿಗೆ ಬಹಳ ನೋವು ತಂದಿತ್ತು ಎಂದು ನದ್ವಿ ಅವರ ಕಿರಿಯ ಸೋದರ ಜಮೀಲ್ ಅಖ್ತರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News