ಲಾಕ್ ಡೌನ್ ವೇಳೆ ಬೇಡಿಕೆ ಕುಸಿತ: 400 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಜೆಸಿಬಿ ಇಂಡಿಯಾ

Update: 2020-06-13 07:18 GMT

ಹೊಸದಿಲ್ಲಿ : ಅರ್ಥ್ ಮೂವಿಂಗ್ ಮತ್ತು  ಕಟ್ಟಡ ನಿರ್ಮಾಣ ಸಾಧನಗಳ ತಯಾರಕ ಸಂಸ್ಥೆ ಜೆಸಿಬಿ ಇಂಡಿಯಾ ತನ್ನ 400 ಖಾಯಂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಕೊರೋನವೈರಸ್ ತಡೆಗಟ್ಟುವ ಸಲುವಾಗಿ ಹೇರಲಾಗಿದ್ದ ಲಾಕ್ ಡೌನ್‍ನಿಂದಾಗಿ  ಕಂಪೆನಿಯ ಸಾಧನಗಳಿಗೆ ಕುಸಿದ ಬೇಡಿಕೆಗನುಗುಣವಾಗಿ ಈ ಉದ್ಯೋಗ ಕಡಿತವನ್ನು ಸಂಸ್ಥೆ ಮಾಡಿದೆ.

ತನ್ನ ಉತ್ಪನ್ನಗಳಿಗೆ ಬೇಡಿಕೆ ಮೇ ಮತ್ತು ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 80ರಷ್ಟು ಕುಸಿತ ಕಂಡಿದೆ ಎಂದು ಕಂಪೆನಿ ಹೇಳಿದೆ. "ಲಾಕ್ ಡೌನ್ ವೇಳೆ ನಿರ್ಮಾಣ ಕಾಮಗಾರಿಗಳು ಕಡಿಮೆಗೊಂಡಿದ್ದರಿಂದ ಎಪ್ರಿಲ್ ತಿಂಗಳಲ್ಲಿ ನಿರ್ಮಾಣ ಸಾಧನಗಳಿಗೆ ಬೇಡಿಕೆಯೇ ಇರಲಿಲ್ಲ ಎಂದು ಜೆಸಿಬಿ ಕಂಪೆನಿಯ ವಕ್ತಾರರು ಹೇಳಿದ್ದಾರೆ.

2007ರಿಂದ ಜೆಸಿಬಿ ಕಂಪೆನಿಯ ಉತ್ಪನ್ನಗಳಿಗೆ ಭಾರತದಲ್ಲಿ ಗರಿಷ್ಠ ಬೇಡಿಕೆಯಿತ್ತು. ಸದ್ಯ ಜೆಸಿಬಿ ಇಂಡಿಯಾದಲ್ಲಿ 5,000ಕ್ಕೂ ಅಧಿಕ ಉದ್ಯೋಗಿಗಳು, 60ಕ್ಕೂ ಅಧಿಕ ವಿತರಕರಿದ್ದು ದೇಶಾದ್ಯಂತ ಕಂಪೆನಿಯ 700 ಮಳಿಗೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News