ದೇಶದಲ್ಲಿ ಒಂದೇ ದಿನ 13 ಸಾವಿರ ದಾಟಿದ ಕೊರೋನ ಸೋಂಕು

Update: 2020-06-18 03:44 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ 13,124 ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಒಂದೇ ದಿನ ದೇಶದಲ್ಲಿ 2003 ಮಂದಿ ಸೋಂಕಿತರು ಮೃತಪಟ್ಟಿದ್ದರೆ, ಬುಧವಾರ ಈ ಪ್ರಮಾಣ 344ಕ್ಕೆ ಇಳಿದಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,67,093ಕ್ಕೇರಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 114 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರ ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ 81 ಆಗಿತ್ತು. ದೆಹಲಿಯಲ್ಲಿ 67 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರ ದೇಶದಲ್ಲಿ 2,003 ಸಾವಿನ ಪ್ರಕರಣಗಳು ವರದಿಯಾಗಿದ್ದರೂ, 331 ಸಾವು ಮಾತ್ರ ಮಂಗಳವಾರ ಸಂಭವಿಸಿದ್ದು, ಉಳಿದ 1672 ಸಾವು ಹಿಂದಿನ ದಿನಗಳಲ್ಲಿ ಸಂಭವಿಸಿದ್ದು, ಅದನ್ನು ವರದಿಗೆ ಮಂಗಳವಾರ ಸೇರಿಸಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಭಾರತದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 12 ಸಾವಿರದ ಗಡಿ ದಾಟಿದ್ದು, ಒಟ್ಟು 12,259 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ 3.3ರಷ್ಟಿದೆ. ಮಹಾರಾಷ್ಟ್ರದಲ್ಲಿ ಬುಧವಾರ 3,307 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,16,752ಕ್ಕೇರಿದೆ.
ತಮಿಳುನಾಡು ಕೂಡಾ 2174 ಹೊಸ ಪ್ರಕರಣಗಳೊಂದಿಗೆ 50 ಸಾವಿರದ ಗಡಿ ದಾಟಿದೆ. ಒಟ್ಟು 50,193 ಪ್ರಕರಣಗಳು ವರದಿಯಾಗಿರುವ ತಮಿಳುನಾಡಿನಲ್ಲಿ ಬುಧವಾರ 48 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 576ಕ್ಕೇರಿದೆ.

ಕರ್ನಾಟಕದಲ್ಲಿ ಒಂದೇ ದಿನ ಗರಿಷ್ಠ (8) ಸಾವಿನ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 102ಕ್ಕೇರಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 204 ಹೊಸ ಪ್ರಕರಣಗಳು ದೃಢಪಟ್ಟಿವೆ. ರಾಜಸ್ಥಾನದಲ್ಲಿ 326 ಹೊಸ ಪ್ರಕರಣದೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 13,542ಕ್ಕೇರಿದೆ. ತೆಲಂಗಾಣ (269) ಮತ್ತು ಆಂಧ್ರಪ್ರದೇಶ (351) ದಲ್ಲಿ ಕೂಡಾ ಬುಧವಾರ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News