ನಾವು ನಮ್ಮ ಗಲ್ವಾನ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆಯೇ?: ಸರಕಾರಕ್ಕೆ ಶಿವಸೇನೆ ಪ್ರಶ್ನೆ

Update: 2020-06-20 10:07 GMT

ಹೊಸದಿಲ್ಲಿ, ಜೂ.20:ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದ ಮೇಲಿನ ಸಾರ್ವಭೌಮತ್ವ ತನ್ನದಾಗಿದೆ ಎಂಬ ಚೀನಾದ ಹೇಳಿಕೆಗೆ ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೇಂದ್ರ ಸರಕಾರದಿಂದ ಪ್ರತಿಕ್ರಿಯೆ ಕೋರಿದ್ದಾರೆ.

 "ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪೋಸ್ಟ್‌ಗಳು/ಪ್ರದೇಶಗಳನ್ನು ಚೀನಾಕ್ಕೆ ಬಿಟ್ಟುಕೊಡುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡಿದ್ದರು. ಆದರೆ ಇಲ್ಲಿ ಗಲ್ವಾನ್ ಕಣಿವೆ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದೆ. ಇದು ಸ್ವೀಕಾರಾರ್ಹವಲ್ಲ. ಸರಕಾರವು ಈ ಕುರಿತು ಸ್ಪಷ್ಟಪಡಿಸುವ ಅಥವಾ ಪ್ರತಿಕ್ರಿಯಿಸುವ ಅಗತ್ಯವಿದೆ. ನಾವು ನಮ್ಮ ಗಲ್ವಾನ್ ಕಣಿವೆಯನ್ನು ಬಿಟ್ಟುಕೊಟ್ಟಿದ್ದೇವೆಯೇ ಅಥವಾ ಪಿಎಲ್‌ಎಯನ್ನು ಅಲ್ಲಿಂದ ಉಚ್ಚಾಟಿಸಿದ್ದೇವೆಯೇ ಎಂದು ದೇಶವು ತಿಳಿದುಕೊಳ್ಳಲು ಬಯಸಿದೆ'' ಎಂದು ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News