ಸತತ 16ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Update: 2020-06-22 09:32 GMT

ಬೆಂಗಳೂರು : ಪೆಟ್ರೋಲ್  ಮತ್ತು ಡೀಸೆಲ್ ಬೆಲೆಗಳನ್ನು ಇಂದು ಕೂಡ ಏರಿಸಲಾಗಿದ್ದು, ಸತತ 16 ದಿನ ಇಂಧನ ಬೆಲೆಗಳು ಏರಿಕೆ ಕಂಡಂತಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ಪೆಟ್ರೋಲ್ ಲೀಟರ್‍ ಗೆ 79.23 ರೂ. ಇದ್ದರೆ ಇಂದು  79.56 ರೂ. ಆಗಿದೆ. ಡೀಸೆಲ್ ಬೆಲೆ ನಿನ್ನೆಯ ರೂ 78.27 ಬದಲು ಇಂದು ರೂ 78.85 ಆಗಿದೆ.

ಎರಡು ತಿಂಗಳ ಲಾಕ್ ಡೌನ್ ನಂತರ ಕಳೆದ 16 ದಿನಗಳಿಂದ ಏರಿಕೆ ಕಾಣುತ್ತಿರುವ  ಪೆಟ್ರೋಲ್ ಬೆಲೆ  ಇಲ್ಲಿಯ ತನಕ ಲೀಟರ್‍ಗೆ ರೂ 9.21ರಷ್ಟು ಏರಿಕೆಯಾಗಿದ್ದರೆ ಡೀಸೆಲ್ ಬೆಲೆ ರೂ 8.55ರಷ್ಟು ಏರಿಕೆ ಕಂಡಿದೆ.

ಮುಂಬೈಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ನ ಇಂದಿನ ಬೆಲೆ ಕ್ರಮವಾಗಿ ರೂ 86.36 ಹಾಗೂ ರೂ 77.24 ಆಗಿದ್ದರೆ, ಕೊಲ್ಕತ್ತಾದಲ್ಲಿ ರೂ 81.27 ಹಾಗೂ 74.14 ಮತ್ತು ಚೆನ್ನೈಯಲ್ಲಿ ರೂ 82.87 ಹಾಗೂ ರೂ 76.30 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News