ಕೋವಿಡ್ ಸೋಂಕಿತರಿಗೆ ‘ಡೆಕ್ಸಾಮೆಥಾಸೋನ್’ ನೀಡಲು ಕೇಂದ್ರದ ಅನುಮತಿ

Update: 2020-06-27 11:00 GMT

ಹೊಸದಿಲ್ಲಿ: ಕೊರೋನ ವೈರಸ್ ‍ನ ತೀವ್ರ ಮತ್ತು ಸಾಮಾನ್ಯ ಪ್ರಮಾಣದ ಲಕ್ಷಣಗಳನ್ನು ಹೊಂದಿರುವ ಸೋಂಕಿತರಿಗೆ ಮಿಥೈಲ್ಪ್ರೆಡ್ನಿಸೊಲೋನ್ ಔಷಧಿಗೆ ಪರ್ಯಾವಾಗಿ ಕಡಿಮೆ ವೆಚ್ಚದ ಸ್ಟೆರಾಯ್ಡ್ ಔಷಧಿ ಡೆಕ್ಸಾಮೆಥಾಸೋನ್ ನೀಡಲು ಇಂದು ಕೇಂದ್ರ ಸರಕಾರ ಅನುಮತಿ  ನೀಡಿದೆ.

ಗಂಭೀರ ಸ್ಥಿತಿಯಲ್ಲಿರುವ ಕೊರೋನ ವೈರಸ್ ರೋಗಿಗಳ ಜೀವವುಳಿಸಲು ಡೆಕ್ಸಾಮೆಥಾಸೋನ್ ಸಹಾಯ ಮಾಡುತ್ತದೆ ಎಂದು ಬ್ರಿಟನ್ ನಲ್ಲಿ ನಡೆದ ಕ್ಲಿನಿಕಲ್ ಪ್ರಯೋಗಗಳಿಂದ ಕಂಡುಬಂದ ನಂತರ ಈ ಔಷಧಿಯ ಉತ್ಪಾದನೆಯನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿತ್ತು.

‘ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೋಕಾಲ್-ಕೋವಿಡ್-1' ಇದರ ಪರಿಷ್ಕೃತ ಆವೃತ್ತಿಯನ್ನು ಆರೋಗ್ಯ ಸಚಿವಾಲಯ ಇಂದು ಬಿಡುಗಡೆಗೊಳಿಸಿದೆ. ಸಂಧಿವಾತ ಸಮಸ್ಯೆಗಳಲ್ಲಿ ನೋವನ್ನು ತಗ್ಗಿಸಲು ನೀಡುವ ಡೆಕ್ಸಾಮೆಥಾಸೋನ್  ಔಷಧಿಯನ್ನು ಆಮ್ಲಜನಕದ ಅಗತ್ಯವಿರುವ ಕೋವಿಡ್-19 ಸೋಂಕಿತರಿಗೆ ಬಳಸಬಹುದೆಂದು ಅದರಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News