ಮುಲಾಯಂ ಯಾದವ್ ಪತ್ನಿ ಆಸ್ಪತ್ರೆಗೆ ದಾಖಲು
Update: 2020-07-06 16:22 GMT
ಲಕ್ನೊ, ಜು.6: ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಪತ್ನಿ ಸಾಧನಾ ಗುಪ್ತಾ ಯಾದವ್ ರಿಗೆ ರವಿವಾರ ಉಸಿರಾಟದ ಸಮಸ್ಯೆ ಕಾಡಿದ್ದು ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಸಾಧನಾ ಗುಪ್ತಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಕೊರೋನ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ ರಾಕೇಶ್ ಕಪೂರ್ ಹೇಳಿದ್ದಾರೆ.