ಬಳಕೆದಾರರಿಗೆ ಸಿಹಿಸುದ್ದಿ: ಫೇಸ್ ಬುಕ್ ನಲ್ಲೇ ಇನ್ನು ಮುಂದೆ ವಾಟ್ಸ್ಯಾಪ್ ಚಾಟ್ ಸಾಧ್ಯತೆ

Update: 2023-06-30 05:07 GMT

ನ್ಯೂಯಾರ್ಕ್ :  ಫೇಸ್ ಬುಕ್ ಮೆಸೆಂಜರ್ ಹಾಗೂ ವಾಟ್ಸ್ಯಾಪ್ ನಡುವೆ ಸಂವಹನ ಸಂಪರ್ಕವೇರ್ಪಡಿಸುವ ನಿಟ್ಟಿನಲ್ಲಿ ಫೇಸ್ ಬುಕ್ ಸದ್ಯ ಕಾರ್ಯನಿರತವಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಎರಡೂ ಮೆಸೇಜಿಂಗ್ ಅಪ್ಲಿಕೇಶನ್‍ ಗಳ ನಡುವೆ ಕ್ರಾಸ್ ಚಾಟ್ ಸಪೋರ್ಟ್ ಆರಂಭಗೊಳ್ಳುವ ನಿರೀಕ್ಷೆಯಿದೆ.

ಈ ಹೊಸ ಫೀಚರ್ ಲಭ್ಯವಾಗಿದ್ದೇ ಆದಲ್ಲಿ  ಯಾವುದಾದರೂ ವಾಟ್ಸ್ಯಾಪ್ ಕಾಂಟ್ಯಾಕ್ಟ್ ಬ್ಲಾಕ್ ಆಗಿದ್ದಲ್ಲಿ ಫೇಸ್ ಬುಕ್‍ ಗೆ ತಿಳಿಯುತ್ತದೆ. ವಾಟ್ಸ್ಯಾಪ್‍ ನಲ್ಲಿ ನೋಟಿಫಿಕೇಶನ್ ಬಂದಲ್ಲಿ, ಚಾಟ್  ವಿವರ, ಉದಾಹರಣೆಗೆ ಫೋನ್ ನಂಬರ್ ಮೆಸೆಂಜರ್‍ನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ವಾಟ್ಸ್ಯಾಪ್  ಸಂದೇಶದಲ್ಲಿರುವ ಮಾಹಿತಿ ಮೆಸೆಂಜರ್‍ ನಲ್ಲಿ ಲಭ್ಯವಾಗದೇ ಇದ್ದರೂ  ಯಾವ ಗ್ರೂಪ್‍ ನಿಂದ ಬಂದಿದೆ ಎಂಬ ಮಾಹಿತಿ ಹಾಗೂ ಕಾಂಟ್ಯಾಕ್ಟ್ ಪ್ರೊಫೈಲ್ ಫೋಟೋ ಮೆಸೆಂಜರ್‍ ನಲ್ಲಿ ಕಾಣಿಸಬಹುದು.

ವಾಟ್ಸ್ಯಾಪ್ ಹಾಗೂ ಫೇಸ್ ಬುಕ್ ಇಂಟಗ್ರೇಶನ್ ಹೊಂದುವ ಅಥವಾ ಹೊಂದದೇ ಇರುವ ಆಯ್ಕೆಯನ್ನು ಬಳಕೆದಾರರಿಗೆ ನೀಡುವ ಸಾಧ್ಯತೆಯೂ ಇದೆ. ಕೆಲವೊಂದು ವರದಿಗಳ ಪ್ರಕಾರ ಬಳಕೆದಾರರು ಫೇಸ್ ಬುಕ್ ಮೆಸೆಂಜರ್ ಮೂಲಕ ವಾಟ್ಸ್ಯಾಪ್ ಸಂದೇಶವನ್ನು ಕಳುಹಿಸಲು ಸಾಧ್ಯವಾಗಬಹುದು. ಈ ರೀತಿಯ ಆಯ್ಕೆ ಲಭ್ಯವಾದರೆ ವಾಟ್ಸ್ಯಾಪ್ ಮೆಸೇಜ್ ಗಳಿಗಾಗಿ ವಾಟ್ಸ್ಯಾಪನ್ನು ಬಳಸಬೇಕಾದ ಅಗತ್ಯವಿಲ್ಲ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News