ಇನ್‍ ಸ್ಟಾಗ್ರಾಂ ಬಳಕೆದಾರರ ಮೊಬೈಲ್ ಕ್ಯಾಮರಾಗಳನ್ನು ಅಕ್ರಮವಾಗಿ ಬಳಸಿದ ಫೇಸ್ ಬುಕ್: ಆರೋಪ

Update: 2023-06-30 05:07 GMT

ನ್ಯೂಯಾರ್ಕ್: ಇನ್‍ ಸ್ಟಾಗ್ರಾಂ ಬಳಕೆದಾರರ ಮೊಬೈಲ್ ಫೋನ್ ಕ್ಯಾಮರಾಗಳನ್ನು ಗೌಪ್ಯವಾಗಿ ಬಳಸುವ ಮೂಲಕ ಫೇಸ್ ಬುಕ್ ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯದಲ್ಲಿ ಗುರುವಾರ ಬ್ರಿಟಾನಿ ಕೊಂಡಿಟಿ ಎಂಬ ಇನ್‍ ಸ್ಟಾಗ್ರಾಂ ಬಳಕೆದಾರ ಮೊಕದ್ದಮೆಯೊಂದನ್ನೂ ದಾಖಲಿಸಿದ್ದಾರೆ.

ಇನ್‍ ಸ್ಟಾಗ್ರಾಂ ಬಳಕೆದಾರರು ತಮ್ಮ ಐಫೋನ್ ಕ್ಯಾಮರಾಗಳನ್ನು ಬಳಸದೇ ಇದ್ದರೂ ಅದನ್ನು  ಬಳಸಿರುವ ಕುರಿತು ಜುಲೈ ತಿಂಗಳಲ್ಲಿ ತಿಳಿದು ಬಂದಿತ್ತೆಂದು ಅಪೀಲುದಾರರು ಹೇಳಿದ್ದಾರೆ.

ಆದರೆ ಈ ಆರೋಪವನ್ನು ಫೇಸ್ ಬುಕ್ ನಿರಾಕರಿಸಿದೆಯಲ್ಲದೆ ಇದಕ್ಕೆ ಬಗ್ ಕಾರಣವೆಂದು ತಿಳಿಸಿದೆ. ಇದನ್ನು ಸರಿಪಡಿಸಲಾಗುತ್ತಿದೆ ಎಂದೂ ಸಂಸ್ಥೆ ಹೇಳಿದ್ದು, ಈ ಬಗ್‍ ನಿಂದಾಗಿ  ಇನ್‍ ಸ್ಟಾಗ್ರಾಂ ಆ್ಯಪ್ ಐಫೋನ್ ಕ್ಯಾಮರಾಗಳನ್ನು ಬಳಸುತ್ತಿದೆ ಎಂಬ ಸುಳ್ಳು ನೋಟಿಫಿಕೇಶನ್‍ ಗಳು ಬರುತ್ತಿದ್ದವು ಎಂದೂ ಫೇಸ್ ಬುಕ್ ತಿಳಿಸಿದೆ.

ಆದರೆ ಬ್ರಿಟಾನಿ ತಮ್ಮ ಅಪೀಲಿನಲ್ಲಿ ಇನ್‍ ಸ್ಟಾಗ್ರಾಂ ಉದ್ದೇಶಪೂರ್ವಕವಾಗಿ ಬಳಕೆದಾರರ ಕ್ಯಾಮರಾ ಬಳಸಿ ಡಾಟಾ ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರಲ್ಲದೆ ಬಳಕೆದಾರರ ಸೂಕ್ಷ್ಮ ಮತ್ತು ಖಾಸಗಿ ಮಾಹಿತಿಯನ್ನು ಈ ಮೂಲಕ ಸಂಸ್ಥೆ ತನ್ನ ಮಾರ್ಕೆಟ್ ರಿಸರ್ಚ್ ಅಂಗವಾಗಿ ಪಡೆದಿರುವ ಸಾಧ್ಯತೆಯಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News