ನೀವು ಕಳುಹಿಸಿದ ಫೋಟೋ, ವೀಡಿಯೋಗಳನ್ನು ಇನ್ನೊಬ್ಬರ ಫೋನ್‍ನಿಂದ ಡಿಲೀಟ್ ಮಾಡಬಹುದು!
ನ್ಯೂಯಾರ್ಕ್: ವಾಟ್ಸ್ ಆ್ಯಪ್ ಹೊಸ ಫೀಚರ್ ಒಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆಯೆನ್ನಲಾಗಿದ್ದು ಈ ಹೊಸ ಫೀಚರ್ ಬಳಕೆದಾರರಿಗೆ ತಾವು ಇನ್ನೊಬ್ಬರಿಗೆ ಕಳುಹಿಸಿದ ಚಿತ್ರ, ವೀಡಿಯೋ ಅಥವಾ ಗಿಫ್ ಅನ್ನು ನಂತರ ಅವರ ಫೋನ್‍ನಿಂದ ಡಿಲೀಟ್ ಮಾಡಲು ಅನುವು ಮಾಡಿಕೊಡುತ್ತದೆ.
‘ದಿ ಎಕ್ಸ್‍ಪೈರಿಂಗ್ ಮೀಡಿಯಾ’ ಎಂಬ ಹೆಸರಿನ ಫೀಚರ್ ಅನ್ನು ಎನೇಬಲ್ ಮಾಡಬೇಕಿದ್ದರೆ ಚಿತ್ರ ಅಥವಾ ವೀಡಿಯೋ ಸಂದೇಶ ಕಳುಹಿಸುವವರು `ವೀವ್ ಒನ್ಸ್' ಬಟನ್ ಆಯ್ಕೆ ಮಾಡಬೇಕಿದೆ. ಈ ಸಂದೇಶ ಸಂಬಂಧಿತರ ಫೋನ್‍ಗೆ ತಲುಪಿದ ನಂತರ ಅವರು ಚ್ಯಾಟ್‍ನಲ್ಲಿರುವಾಗ ಮಾತ್ರ ಅದು ಕಾಣಿಸುತ್ತದೆ. ಅವರು ಚ್ಯಾಟ್ ವಿಂಡೋದಿಂದ ಹೊರಬರುತ್ತಿದ್ದಂತೆಯೇ ‘ದಿಸ್ ಮೀಡಿಯಾ ವಿಲ್ ಡಿಸ್‍ಅಪೀಯರ್ ಒನ್ಸ್ ಯು ಲೀವ್ ದಿಸ್ ಚ್ಯಾಟ್,' ಎಂಬ ಸಂದೇಶ ಕಾಣಿಸುತ್ತದೆ.
ಅವರು ಮತ್ತೆ ಚ್ಯಾಟ್ ವಿಂಡೋಗೆ ಹೋದರೆ “ವೀವ್ ಒನ್ಸ್ ಫೋಟೋ ಎಕ್ಸ್ ಪೈಯರ್ಡ್,'' ಸಂದೇಶ ಕಾಣಿಸುತ್ತದೆ.
ವಾಟ್ಸ್ ಆ್ಯಪ್ ಬೇಟಾ ಆಂಡ್ರಾಯ್ಡ್ 2.20.2011 ವರ್ಷನ್‍ಗಾಗಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಹೊಸ ಫೀಚರ್ ಯಾವಾಗ ಲಭ್ಯವಾಗಲಿದೆಯೆಂದು ತಿಳಿದು ಬಂದಿಲ್ಲ.