2021ರ ಆರಂಭದಲ್ಲಿ ಕೋವಿಡ್ ಲಸಿಕೆ: ಕೇಂದ್ರ ಆರೋಗ್ಯ ಸಚಿವ

Update: 2020-10-13 14:38 GMT

ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ ಗೆ ಲಸಿಕೆ ಕಂಡು ಹಿಡಿಯುವ ಪ್ರಕ್ರಿಯೆ ಬಿರುಸಾಗಿ ನಡೆಯುತ್ತಿದ್ದು, ಕೋಟ್ಯಂತರ ಭಾರತೀಯರಿಗೆ ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಸಿಹಿ ಸುದ್ದಿ ನೀಡಿದ್ದಾರೆ. 2021ರ ಆರಂಭದಲ್ಲೇ ಕೋವಿಡ್-19 ವಿರುದ್ಧ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ. ದೇಶದಲ್ಲಿ ಲಸಿಕೆಗಳನ್ನು ವಿತರಿಸುವ ಕುರಿತು ತಜ್ಞರು ಯೋಜನೆಯ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದರು.

ಮುಂದಿನ ವರ್ಷದ ಆರಂಭದಲ್ಲಿ ಒಂದಕ್ಕಿಂತ ಹೆಚ್ಚು ಮೂಲಗಳಿಂದ ನಾವು ಲಸಿಕೆಯನ್ನು ಹೊಂದುವ ನಿರೀಕ್ಷೆ ಇದೆ. ದೇಶದಲ್ಲಿ ಲಸಿಕೆಯನ್ನು ಹೇಗೆ ವಿತರಿಸಬಹುದು ಎಂಬ ಕುರಿತು ನಮ್ಮ ತಜ್ಞರ ಗುಂಪು ಯೋಜನೆಯ ರಣನೀತಿಗಳನ್ನು ರೂಪಿಸುತ್ತಿದ್ದಾರೆ ಎಂದು ಸಚಿವರುಗಳ ಸಭೆಯಲ್ಲಿ ಹರ್ಷವರ್ಧನ್ ಹೇಳಿದರು.

ದೇಶದಲ್ಲಿ ಕೋವಿಡ್ ಪ್ರಕರಣಗಳು 70 ಲಕ್ಷ ಗಡಿ ದಾಟಿದ ಸಮಯದಲ್ಲೇ ಆರೋಗ್ಯ ಸಚಿವರು ಈ ಘೋಷಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News