ಸುರಕ್ಷತೆಗಾಗಿ ದಿಲ್ಲಿಗೆ ಸ್ಥಳಾಂತರವಾಗಲು ಹತ್ರಸ್ ಸಂತ್ರಸ್ತೆಯ ಕುಟುಂಬದ ಒಲವು

Update: 2020-10-16 09:51 GMT

 ಹೊಸದಿಲ್ಲಿ: ಉತ್ತರಪ್ರದೇಶದ ಹತ್ರಸ್‌ನಲ್ಲಿ ಕಳೆದ ತಿಂಗಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ 19ರ ಹರೆಯದ ದಲಿತ ಯುವತಿಯ ಕುಟುಂಬ ಸದಸ್ಯರು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಿಲ್ಲಿಗೆ ಸ್ಥಳಾಂತರವಾಗಲು ಬಯಸಿದ್ದು, ತಮ್ಮ ಹಳ್ಳಿಯಿಂದ ದಿಲ್ಲಿಗೆ ತೆರಳಲು ನೆರವಾಗುವಂತೆ ರಾಜ್ಯ ಸರಕಾರವನ್ನು ವಿನಂತಿಸಿದೆೆ. ಈ ವಿಚಾರವನ್ನು ಸಂತ್ರಸ್ತೆ ಯುವತಿಯ ಸಹೋದರ ಹೇಳಿದ್ದಾಗಿ ಸುದ್ದಿಸಂಸ್ಥೆ ಎಎನ್‌ಐ ಶುಕ್ರವಾರ ವರದಿ ಮಾಡಿದೆ.

ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯ ಪ್ರಕರಣದ ತನಿಖೆಯನ್ನು ದಿಲ್ಲಿಯಲ್ಲಿ ನಡೆಸಬೇಕೆಂದು ಕುಟುಂಬ ಬಯಸಿದೆ.

ಯುವತಿಯ ಕುಟುಂಬವು ಪ್ರಕರಣವನ್ನು ದಿಲ್ಲಿಗೆ ವರ್ಗಾಯಿಸಬೇಕೆಂದೂ ಬಯಸಿದೆ.

 ಕುಟುಂಬ ಕೂಡ ದಿಲ್ಲಿಗೆ ಸ್ಥಳಾಂತರವಾಗಲು ಬಯಸಿದೆ. ಈ ನಿಟ್ಟಿನಲ್ಲಿ ಸರಕಾರ ನಮಗೆ ನೆರವು ನೀಡಬೇಕು. ನಾವು ಸರಕಾರವನ್ನೇ ಅವಲಂಬಿಸಿದ್ದೇವೆ. ನಾವು ಎಲ್ಲಿದ್ದರೂ ಸುರಕ್ಷಿತವಾಗಿರಲು ಬಯಸಿದ್ದೇವೆ ಎಂದು ಯುವತಿಯ ಸಹೋದರ ಎಎನ್‌ಐಗೆ ತಿಳಿಸಿದ್ದಾರೆ.

ಕೇಂದ್ರ ತನಿಖಾ ದಳ(ಸಿಬಿಐ)ಹತ್ರಸ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ಸಂತ್ರಸ್ತೆಯ ಸಂಬಂಧಿಕರು ಹಾಗೂ ಠಾಕೂರ್ ಸಮುದಾಯಕ್ಕೆ ಸೇರಿರುವ ನಾಲ್ವರು ಆರೋಪಿಗಳ ಕುಟುಂಬದವರನ್ನು ವಿಚಾರಣೆ ನಡೆಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News