ಅಮೆರಿಕನ್ನರು ಕೊರೋನ ಜೊತೆ ಸಾಯುವುದನ್ನು ಕಲಿಯುತ್ತಿದ್ದಾರೆ: ಟ್ರಂಪ್ ವಿರುದ್ಧ ಜೋ ಬೈಡನ್ ವಾಗ್ದಾಳಿ

Update: 2020-10-24 16:25 GMT

ವಾಶಿಂಗ್ಟನ್, ಅ. 24: ಕೋವಿಡ್-19 ಸಾಂಕ್ರಾಮಿಕದ ಜೊತೆಗೆ ಬದುಕುವುದನ್ನು ಕಲಿಯಲು ಅಮೆರಿಕನ್ನರಿಗೆ ಸಾಧ್ಯವಾಗುತ್ತಿಲ್ಲ, ಆದರೆ ಸಾಯುವುದನ್ನು ಕಲಿಯುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ.

ಅಮೆರಿಕದ ಇತ್ತೀಚಿನ ಇತಿಹಾಸದಲ್ಲಿ ದೇಶಕ್ಕೆ ಎದುರಾದ ಎಲ್ಲ ಸಂಕಷ್ಟಗಳನ್ನೂ ಕೊರೋನ ವೈರಸ್ ಮೀರಿಸಿದೆ ಹಾಗೂ ಶಮನಗೊಳ್ಳುವ ಯಾವುದೇ ಸೂಚನೆಯನ್ನೂ ಅದು ನೀಡುತ್ತಿಲ್ಲ ಎಂದು ತನ್ನ ತವರು ರಾಜ್ಯ ಡೆಲವೇರ್‌ನಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದಲ್ಲಿ 77 ವರ್ಷದ ಬೈಡನ್ ಹೇಳಿದರು.

ವೈರಸ್ ಈ ಪ್ರಮಾಣದಲ್ಲಿ ದೇಶಾದ್ಯಂತ ಹರಡಲು ಟ್ರಂಪ್ ಸರಕಾರದ ನೀತಿಗಳೇ ಕಾರಣ ಎಂದು ಆರೋಪಿಸಿದ ಅವರು, ಸಾಂಕ್ರಾಮಿಕವು ದೇಶದ ಆರ್ಥಿಕತೆಗೆ ಮಾರಕ ಹೊಡೆತವನ್ನು ನೀಡಿದೆ ಎಂದರು.

ಅಧ್ಯಕ್ಷನಾದರೆ ಪ್ರತಿಯೊಬ್ಬರಿಗೆ ಕೊರೋನ ಲಸಿಕೆ

ನಾನು ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದರೆ ಎಲ್ಲ ಅಮೆರಿಕನ್ನರಿಗೆ ಕೋವಿಡ್-19 ಲಸಿಕೆ ಉಚಿತವಾಗಿ ಸಿಗುವಂತೆ ಮಾಡುತ್ತೇನೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಹೇಳಿದರು.

‘‘ನಾನು ಅಧ್ಯಕ್ಷನಾದರೆ ಕೊರೋನ ವೈರಸನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಂಪೂರ್ಣ ಗಮನ ಹರಿಸುತ್ತೇನೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಅಮೆರಿಕನ್ನರಿಗೆ ಲಸಿಕೆ ಖರೀದಿಸಲು ನೆರವು ನೀಡುತ್ತೇನೆ’’ ಎಂದು ಸಾಂಕ್ರಾಮಿಕವನ್ನು ಎದುರಿಸುವ ತನ್ನ ಯೋಜನೆಯನ್ನು ಮಂಡಿಸುತ್ತಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News