ಹೊಸದಿಲ್ಲಿ: ಅಕ್ಟೋಬರ್‌ನಲ್ಲಿ 58 ವರ್ಷಗಳಲ್ಲೇ ಅತಿ ತೀವ್ರ ಚಳಿ

Update: 2020-11-01 18:47 GMT

 ಹೊಸದಿಲ್ಲಿ, ನ. 1: ಹೊಸದಿಲ್ಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಕಳೆದ 58 ವರ್ಷಗಳಲ್ಲೇ ಅತಿ ತೀವ್ರ ಚಳಿ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆಯ ದತ್ತಾಂಶ ಹೇಳಿದೆ.

ಈ ವರ್ಷ ಅಕ್ಟೋಬರ್‌ನಲ್ಲಿ ಅತ್ಯಂತ ಕನಿಷ್ಠ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು 1962ರ ನಂತರ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ. 1962ರಲ್ಲಿ 16.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ದಿಲ್ಲಿಯಲ್ಲಿ ಅಕ್ಟೋಬರ್‌ನಲ್ಲಿ ದಾಖಲಾಗುವ ಅತ್ಯಂತ ಕನಿಷ್ಠ ತಾಪಮಾನ 19.1 ಡಿಗ್ರಿ ಸೆಲ್ಸಿಯಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News