ಸಂದೇಶಗಳು ಏಳು ದಿನಗಳ ಬಳಿಕ ಸ್ವಯಂ ಡಿಲೀಟ್ ಆಗುವ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸ್‌ಆ್ಯಪ್

Update: 2023-06-30 05:07 GMT

ಹೊಸದಿಲ್ಲಿ,ನ.5: ಏಳು ದಿನಗಳ ಬಳಿಕ ಸಂದೇಶಗಳನ್ನು ಅಳಿಸುವ ‘ಡಿಸ್‌ಅಪಿಯರಿಂಗ್ ಮೆಸೇಜಸ್ ’ಎಂಬ ವಿನೂತನ  ವೈಶಿಷ್ಟ್ಯ ವನ್ನು ವಾಟ್ಸ್‌ಆ್ಯಪ್ ಗುರುವಾರ ಪರಿಚಯಿಸಿದೆ.

ಕಾಂಟ್ಯಾಕ್ಟ್‌ನ ಹೆಸರಿನ ಮೇಲೆ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಏಳು ದಿನಗಳ ಅವಧಿಯನ್ನು ತಾನು ನಂತರ ಇನ್ನಷ್ಟು ಕಡಿಮೆ ಮಾಡಬಹುದು ಎಂದೂ ವಾಟ್ಸ್‌ಆ್ಯಪ್ ಸುಳಿವನ್ನು ನೀಡಿದೆ.

ವೈಯಕ್ತಿಕ ಚಾಟ್‌ಗಳಿಗಾಗಿ ಬಳಕೆದಾರರು ‘ಡಿಸ್‌ಅಪಿಯರಿಂಗ್ ಮೆಸೇಜ್’ ವೈಶಿಷ್ಟವನ್ನು ಚಾಲನೆಯಲ್ಲಿಡಬಹುದು,ಆದರೆ ಗ್ರೂಪ್ ಚಾಟ್‌ಗಳಲ್ಲಿ ಅಡ್ಮಿನ್ ಮಾತ್ರ ಇದನ್ನು ಮಾಡಬಹುದಾಗಿದೆ.

 ‘ಡಿಸ್‌ಅಪಿಯರಿಂಗ್ ಮೆಸೇಜ್’ ಅನ್ನು ಸಕ್ರಿಯಗೊಳಿಸಿದ ನಂತರದ ಚಾಟ್‌ನಲ್ಲಿ ಕಳುಹಿಸಲಾದ ಅಥವಾ ಸ್ವೀಕರಿಸಲಾದ ಸಂದೇಶಗಳಿಗೆ ಮಾತ್ರ ಈ ವೈಶಿಷ್ಟ ಅನ್ವಯಿಸುತ್ತದೆ ಎಂದು ವಾಟ್ಸ್ ಆ್ಯಪ್ ತಿಳಿಸಿದೆ. ‘ಡಿಸ್‌ಅಪಿಯರಿಂಗ್ ಮೆಸೇಜ್’ ಅನ್ನು ಸಕ್ರಿಯಗೊಳಿಸಿದ ಬಳಿಕ ಬಳಕೆದಾರರು ಸಂದೇಶವು ಕಣ್ಮರೆಯಾಗುವ ಮುನ್ನ ಅದರ ಬ್ಯಾಕ್‌ ಅಪ್‌ನ್ನು ಸೃಷ್ಟಿಸಿದರೆ ಸಂದೇಶವು ಬ್ಯಾಕ್‌ಪ್ ಸ್ಟೋರೇಜ್‌ನಲ್ಲಿ ಇರುತ್ತದೆ. ಆದರೆ ಈ ಸಂದೇಶಗಳನ್ನು ಬ್ಯಾಕಪ್‌ನಿಂದ ಮರುಸ್ಥಾಪಿಸಲು ಪ್ರಯತ್ನಿಸಿದರೆ ಅವು ಅಳಿಸಿ ಹೋಗುತ್ತವೆ. ‘ಡಿಸ್‌ಅಪಿಯರಿಂಗ್ ಮೆಸೇಜ್’ ಸಂದೇಶಗಳ ಶಾಶ್ವತ ದಾಖಲಾತಿಯನ್ನು ತಡೆಯುವುದಿಲ್ಲ. ಯಾರೇ ಆದರೂ ಸಂದೇಶವು ಕಣ್ಮರೆಯಾಗುವ ಮುನ್ನ ಅದರ ಸ್ಕ್ರೀನ್‌ಶಾಟ್ ತೆಗೆದು ಸೇವ್ ಮಾಡಿಕೊಳ್ಳಲು ಈಗಲೂ ಸಾಧ್ಯವಿದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News