ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ. ಇಮ್ರಾನ್ ಅಲಿ ಅನಾಲಿಟಿಕಲ್ ಕೆಮಿಸ್ಟ್ರಿಯಲ್ಲಿ ದೇಶದ ನಂ.1 ವಿಜ್ಞಾನಿ

Update: 2020-11-06 06:19 GMT
 ಪ್ರೊ. ಇಮ್ರಾನ್ ಅಲಿ

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಇಮ್ರಾನ್ ಅಲಿ ಅವರನ್ನು ಅನಾಲಿಟಿಕಲ್ ಕೆಮಿಸ್ಟ್ರಿ ಕ್ಷೇತ್ರದ ಭಾರತದ ನಂ. 1 ವಿಜ್ಞಾನಿ ಹಾಗೂ ಜಗತ್ತಿನ 24ನೇ ಅತ್ಯುತ್ತಮ ವಿಜ್ಞಾನಿ ಎಂದು ಅಮೆರಿಕಾದ ಸ್ಟ್ಯಾನ್‍ಫೋರ್ಡ್ ವಿವಿಯ  ವಿಜ್ಞಾನಿಗಳ ತಂಡವೊಂದು ಗುರುತಿಸಿದೆ.

ಈ ಟಾಪ್ ವಿಜ್ಞಾನಿಗಳ ಪಟ್ಟಿಯನ್ನು ಖ್ಯಾತ ಪಿಎಲ್‍ಒಎಸ್ ಬಯಾಲಜಿ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.  ಈ ಪಟ್ಟಿಯಲ್ಲಿ  ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳ  ಅತ್ಯುತ್ತಮ 68,80,389 ವಿಜ್ಞಾನಿಗಳ ಹೆಸರುಗಳನ್ನು ನೀಡಲಾಗಿದೆ.  ಜಾನ್ ಪಿ ಎ ಲೋನ್ನಿಡಿಸ್ ಇಟ್ ಆಲ್ ಅವರ ಸಂಶೋಧನಾ ಗ್ರಂಥ 'ಅಪ್ಡೇಟೆಡ್ ಸಾಯನ್ಸ್-ವೈಡ್ ಆಥರ್ ಡಾಟಾಬೇಸಸ್ ಆಫ್ ಸ್ಟಾಂಡರ್ಡೈಝ್ಡ್ ಸೈಟೇಶನ್ ಇಂಡಿಕೇಟರ್ಸ್ ''ನಲ್ಲಿ ಈ ವಿಜ್ಞಾನಿಗಳ ಪಟ್ಟಿ ನೀಡಲಾಗಿದೆ.

ಪ್ರೊಫೆಸರ್ ಅಲಿ ಹೊರತಾಗಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಹಲವು ಖ್ಯಾತ ಸಂಶೋಧಕರು ಈ ಪಟ್ಟಿಯ ಟಾಪ್ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿದ್ದಾರೆ.

ಬಯೋಫಿಸಿಕ್ಸ್ ಕ್ಷೇತ್ರದಲ್ಲಿ ದೇಶದ 4ನೇ ಅತ್ಯುನ್ನತ ವಿಜ್ಞಾನಿಯಾಗಿ ಸೆಂಟರ್ ಫಾರ್ ಇಂಟರ್‍ಡಿಸಿಪ್ಲಿನರಿ ರಿಸರ್ಚ್ ಇನ್ ಬೇಸಿಕ್ ಸಾಯನ್ಸಸ್ ಇಲ್ಲಿನ ಹಿರಿಯ ವಿಜ್ಞಾನಿ ಪ್ರೊ ಫೈಝಾನ್ ಅಹ್ಮದ್ ಅವರ ಹೆಸರು ಈ ಪಟ್ಟಿಯಲ್ಲಿದೆ.

ನ್ಯೂಕ್ಲಿಯರ್ ಎಂಡ್ ಫಾರ್ಟಿಕಲ್ ಫಿಸಿಕ್ಸ್ ಕ್ಷೇತ್ರದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಹತ್ತನೇ ಸ್ಥಾನವನ್ನು ಸೆಂಟರ್ ಫಾರ್ ಥಿಯರಿಟಿಕಲ್ ಫಿಸಿಕ್ಸ್  ಸಂಸ್ಥೆಯ ಪ್ರೊ. ಮುಹಮ್ಮದ್ ಸಮಿ ಇದ್ದರೆ ಇದೇ ಕ್ಷೇತ್ರದಲ್ಲಿ ಇದೇ ಸಂಸ್ಥೆಯ ಪ್ರೊ ಅಂಜನ್ ಆನಂದ ಸೇನ್ 31ನೇ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News