ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿದ ನಿವಾರ್ ಚಂಡಮಾರುತ

Update: 2020-11-25 05:34 GMT

ಚೆನ್ನೈ:ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿಯಲ್ಲಿ ನಿವಾರ್ ಚಂಡಮಾರುತವು ಗಂಟೆಗೆ 145 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮೂಲಕ ಅಪ್ಪಳಿಸಿದೆ.

ಚಂಡಮಾರುತವು ಮತ್ತಷ್ಟು ತೀವ್ರತೆ ಪಡೆಯುವ ಸಾಧ್ಯತೆಯಿದೆ. ತಮಿಳುನಾಡಿನ ಮಾಮಲ್ಲಪ್ಪುರಂ ಹಾಗೂ ಪುದುಚೇರಿಯ ಕರೈಕಲ್ ಕರಾವಳಿಯ ನಡುವೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿದೆ. ನಿವಾರ್ ಚಂಡಮಾರುತದಿಂದ ಭಾರೀ ಮಳೆ ಹಾಗೂ ಗಾಳಿ ಬೀಸಲಿದೆ.

ಮಂಗಳವಾರ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡೂ ಸರಕಾರಗಳಿಗೆ ಸಾಧ್ಯವಿರುವ ನೆರವು ನೀಡುವ ಭರವಸೆ ನೀಡಿದ್ದರು. ತಮಿಳುನಾಡಿನ ಏಳು ಜಿಲ್ಲೆಗಳ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲರೂ ಮನೆಯೊಳಗೆ ಇರಬೇಕು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News