ಈ ಮಹಾನಗರದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ದರ 90 ರೂ.ಗೆ ಅಧಿಕ

Update: 2020-12-06 09:48 GMT

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು ಸತತ ಐದನೇ ದಿನವಾದ ರವಿವಾರ ಎಲ್ಲ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಹೆಚ್ಚಳ ಮಾಡಿವೆ. ಭಾರತೀಯ ತೈಲ ನಿಗಮದ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 28 ಪೈಸೆ ಹಾಗೂ 30 ಪೈಸೆ ಹೆಚ್ಚಳವಾಗಿದೆ.

ಇಂಧನ ದರಗಳ ನಿರಂತರ ಪರಿಷ್ಕೃರಣೆಯಿಂದಾಗಿ ಮಹಾರಾಷ್ಟ್ರದ ಏಳು ಜಿಲ್ಲೆಗಳಲ್ಲಿ ಶುಕ್ರವಾರ ಡೀಸೆಲ್ ಬೆಲೆ 80ರ ಗಡಿ ದಾಟಿದೆ. ಶನಿವಾರ ಮುಂಬೈನಲ್ಲಿ ಆಟೊ ಇಂಧನಗಳ ಬೆಲೆಯು ಕ್ರಮವಾಗಿ ಪ್ರತಿ ಲೀಟರ್‌ಗೆ 89.78 ರೂ. ಹಾಗೂ 79.93 ರೂ. ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಕ್ರಮವಾಗಿ ಪ್ರತಿ ಲೀಟರ್‌ಗೆ 90 ಹಾಗೂ 80 ರೂ.ಗಡಿ ದಾಟಿದೆ. ಈ ಎರಡು ಇಂಧನಗಳ ಬೆಲೆ ಕ್ರಮವಾಗಿ 30 ಪೈಸೆ ಹಾಗೂ 27 ಪೈಸೆ ಹೆಚ್ಚಳವಾಗುವುದರೊಂದಿಗೆ ಡೀಸೆಲ್ ಬೆಲೆ ಲೀಟರ್‌ಗೆ 80.23 ರೂ. ಹಾಗೂ ಪೆಟ್ರೋಲ್ ದರ ಲೀಟರ್‌ಗೆ 90.05 ರೂ. ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News