ಗೋ ಹತ್ಯೆ ನಿಷೇಧದ ಬದಲು ಅಮಾನವೀಯ ಕೃತಕ ಗರ್ಭಧಾರಣೆ ನಿಷೇಧ ಜಾರಿಯಾಗಲಿ
ಹಾಲು ಕೊಡುವ ದನಗಳನ್ನು ಯಾರೂ ಮಾಂಸಕ್ಕಾಗಿ ಮಾರುವುದಿಲ್ಲ. ಆಹಾರಕ್ಕಾಗಿ ಶವವಾಗುವ ದನಗಳಿಗಿಂತ ಸರಕಾರದ ನೀತಿಗಳಿಂದ ಕೊಟ್ಟಿಗೆಯಲ್ಲಿ ಜೀವಂತ ಶವವಾಗುವ ದನಗಳ ಸಂಖ್ಯೆಯೇ ಹೆಚ್ಚು. ದನವೊಂದು ಬೆದೆಗೆ ಬಂದಾಗ ಸಂಗಾತಿಯೇ ಇಲ್ಲದಂತೆ ಮಾಡಿ ಉಪಕರಣದ ಮೂಲಕ ಗರ್ಭಧಾರಣೆ ಮಾಡಿಸುವುದು ಹತ್ಯೆಗಿಂತಲೂ ಅಮಾನವೀಯ ಕ್ರಮ.
ದನಗಳು ಬೆದೆಗೆ ಬಂದಾಗ ರೈತನ ಕಂಟ್ರೋಲ್ ಗೆ ಸಿಗದೇ ಇರುವಷ್ಟು ಹಾರಾಟ, ಓಡಾಟ ಪ್ರಾರಂಭಿಸುತ್ತದೆ. ದನದ ವರ್ತನೆಯೇ ದನ ಬೆದೆಗೆ ಬಂದಿರೋದರ ಮಾಹಿತಿ ನೀಡುತ್ತದೆ. ತಕ್ಷಣ ದನವನ್ನು ಹೋರಿ ಬಳಿ ಬಿಡಲಾಗುತ್ತಿತ್ತು. ಹೋರಿ ಮತ್ತು ದನ ಮಿಲನದ ಬಳಿಕ ಹಟ್ಟಿಗೆ ಮರಳಿ ತಂದು ಕಟ್ಟಲಾಗುತ್ತಿತ್ತು. ಪ್ರತೀ ಊರಲ್ಲೊಂದು ಹೋರಿ ಸಾಕೋ ಮನೆ ಇರುತ್ತಿತ್ತು. ದನ ಮತ್ತು ಹೋರಿ ಮಿಲನಕ್ಕಾಗಿ ವಿಶೇಷ ಸ್ಥಳವನ್ನು ಸಿದ್ದಗೊಳಿಸಲಾಗುತ್ತಿತ್ತು. ದನ ಮತ್ತು ಹೋರಿ ಮಿಲನಕ್ಕಾಗಿಯೇ ಆ ಮನೆಯವರು ಇಂತಿಷ್ಟು ದರವನ್ನು ಪಡೆಯುತ್ತಿದ್ದರು.
ಈಗ ಹಾಗಲ್ಲ. ಪಶು ಸಂಗೋಪನಾ ಇಲಾಖೆಯಿಂದ ದನಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ದನಗಳಿಗೆ ಸಂಗಾತಿ ಎಂದರೇನು ಎಂಬುದಾಗಲೀ, ಲೈಂಗಿಕ ಸುಖ ಎಂಬುದಾಗಲೀ ಗೊತ್ತೇ ಇಲ್ಲ. ಜಾಸ್ತಿ ಹಾಲು ಕೊಡಬೇಕು ಎಂಬ ಕಾರಣಕ್ಕಾಗಿ ಹಸುವಿನ ಗರ್ಭಕೋಶದೊಳಗೆ ಸೂಕ್ತ ಉಪಕರಣಗಳ ಸಹಾಯದಿಂದ ವೀರ್ಯಾಣುಗಳನ್ನು ವರ್ಗಾಯಿಸಲಾಗುತ್ತದೆ. ಒಂದು ಜೀವಿಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆ ಮಾಡುವುದು ಅಮಾನವೀಯ. ಯಾವ ದೇವತೆ, ಜೀವಿಗೂ ಇಲ್ಲದ ಶಿಕ್ಷೆ ಗೋವಿಗೇಕೆ ?
ಗೋ ಹತ್ಯೆ ನಿಷೇಧ ಜಾರಿ ಬದಲು ಅಮಾನವೀಯ ಕೃತಕ ಗರ್ಭಧಾರಣೆ ನಿಷೇಧ ಜಾರಿಗೊಳಿಸಬೇಕಾಗಿದೆ.
ಪತ್ರಕರ್ತ ನವೀನ್ ಸೂರಿಂಜೆ ಡಿ.10ರಂದು ಮಾಡಿರುವ ಫೇಸ್ ಬುಕ್ ಪೋಸ್ಟ್
ಹಾಲು ಕೊಡುವ ದನಗಳನ್ನು ಯಾರೂ ಮಾಂಸಕ್ಕಾಗಿ ಮಾರುವುದಿಲ್ಲ. ಆಹಾರಕ್ಕಾಗಿ ಶವವಾಗುವ ದನಗಳಿಗಿಂತ ಸರಕಾರದ ನೀತಿಗಳಿಂದ ಕೊಟ್ಟಿಗೆಯಲ್ಲಿ ಜೀವಂತ...
Posted by Naveen Soorinje on Thursday, 10 December 2020