ಮತಗಳನ್ನು ಸುಲಭವಾಗಿ ಖರೀದಿಸಬಹುದು ಎಂದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್

Update: 2020-12-11 08:32 GMT

ಭೋಪಾಲ್: "ಒಂದು ಮತ ನೀಡುವ ಮೂಲಕ ಮತದಾರರು ನಾಯಕನನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ, ಮತಗಳನ್ನು ಸುಲಭವಾಗಿ ಖರೀದಿಸಬಹುದು'' ಎಂದು ಬಿಜೆಪಿಯ ಲೋಕಸಭಾ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಪ್ರಜ್ಞಾ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, "ಬಿಜೆಪಿ ನಾಯಕಿ ತನ್ನ ವಿವಾದಾತ್ಮಕ ಹೇಳಿಕೆಗೆ ಹೆಸರುವಾಸಿಯಾಗಿದ್ದು, ಅವರ ಹೇಳಿಕೆ ಯಾವಾಗಲೂ ಸಾರ್ವಜನಿಕರ ಭಾವನೆಗಳಿಗೆ ವಿರುದ್ಧವಾಗಿದೆ. ಬಿಜೆಪಿ ಕೂಡ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಎಂದಿಗೂ ಸಾರ್ವಜನಿಕರನ್ನು ಗೌರವಿಸಿಲ್ಲ'' ಎಂದು ಕಾಂಗ್ರೆಸ್ ರಾಜ್ಯ ಮಾಧ್ಯಮ ಸಂಯೋಜಕ ನರೇಂದ್ರ ಸಲೂಜಾ ಹೇಳಿದ್ದಾರೆ.

 "ನನಗೆ ಅನಿಸುತ್ತದೆ ಇಂತಹ ಸ್ಪಷ್ಟನೆ ಅತ್ಯಂತ ಮುಖ್ಯ. ಒಂದು ಮತವನ್ನು ನೀಡಿ ಯಾರನ್ನೂ ಖರೀದಿಸಲು ಸಾಧ್ಯವಿಲ್ಲ. ಮತಗಳನ್ನು ಖರೀದಿಸಬಹುದು'' ಎಂದು ಭೋಪಾಲ್‌ನಲ್ಲಿ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದ ಪ್ರಜ್ಞಾ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News