ಖ್ಯಾತ ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ: ಪತಿಯ ಬಂಧನ

Update: 2020-12-15 07:53 GMT

ಚೆನ್ನೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಝ್ರತ್‌ಪೇಟ್ ಪೊಲೀಸರು ಇಂದು ಖ್ಯಾತ ತಮಿಳು ಕಿರುತೆರೆ ನಟಿ ವಿ.ಜೆ. ಚಿತ್ರಾ ಅವರ ಪತಿ ಹೇಮಂತ್ ಅವರನ್ನು ಬಂಧಿಸಿದ್ದಾರೆ

ಹೇಮಂತ್ ವಿರುದ್ಧ ಕೇಸ್ ದಾಖಲಿಸುವ ಮೊದಲು ಪೊಲೀಸರು ಸಾಕಷ್ಟು ಸಾಕ್ಷಗಳನ್ನು ಕಲೆ ಹಾಕಿದ್ದಾರೆ. ಚಿತ್ರಾ ಅವರು ಡಿಸೆಂಬರ್ 9 ರಂದು ಬೆಳಗ್ಗಿನ ಜಾವ ಹೊಟೇಲ್ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಚಿತ್ರಾ ಅವರು 'ಪಾಂಡ್ಯನ್ ಸ್ಟೋರಿಸ್' ತಮಿಳು ಧಾರವಾಹಿಗಳಲ್ಲಿ ನಟಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದರು.

ಚಿತ್ರಾ ಅವರ ಪತಿ ಹೇಮಂತ್ರನ್ನು ಬಂಧಿಸಿರುವ ಪೊಲೀಸರು ಪೂನಮಲ್ಲೆ ಹೈಕೋರ್ಟ್‌ನಲ್ಲಿ ಹಾಜರುಪಡಿಸಿದರು. ಆರು ದಿನಗಳ ವಿಚಾರಣೆಗಾಗಿ ಹೇಮಂತ್ರನ್ನು ಪೊನ್ನೇರಿ ಜೈಲಿಗೆ ಕಳುಹಿಸಲಾಗಿದೆ. ಹೇಮಂತ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿ ಪ್ರಕರಣ ದಾಖಲಿಸಲಾಗಿದೆ.

ಚಿತ್ರಾ ಹಾಗೂ ಹೇಮಂತ್ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು.

ಕಿರುತೆರೆಯಲ್ಲಿ ಚಿತ್ರಾ ನಟಿಸಿದ್ದ ದೃಶ್ಯ ಹೇಮಂತ್‌ಗೆ ಇಷ್ಟವಾಗಿರಲಿಲ್ಲ. ಚಿತ್ರಾ ಮೃತಪಟ್ಟ ದಿನ ಅವರ ನಡುವೆ ಜಗಳ ನಡೆದು ಹೇಮನಾಥ್ ಆಕೆಯನ್ನು ನೂಕಿದ್ದ ಎಂದು ಎಸಿಪಿ ಸುದರ್ಶನ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News