ಎಂಜಿಆರ್ ಮಕ್ಕಳ್ ಕಚ್ಚಿಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ: ಇ.ಸಿ. ಸಂಪರ್ಕಿಸಿದ ಎಂಎನ್‌ಎಂ

Update: 2020-12-17 18:02 GMT

ಚೆನ್ನೈ, ಡಿ. 17: 2021ರಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ನೂತನ ಪಕ್ಷವಾದ ಎಂಜಿಆರ್ ಮಕ್ಕಳ್ ಕಚ್ಚಿಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮುಂಜೂರು ಮಾಡಿದ ಕುರಿತಂತೆ ಕಮಲ್‌ಹಾಸನ್ ಅವರ ‘ಮಕ್ಕಳ್ ನೀಧಿ ಮೈಯಮ್’ (ಎಂಎನ್‌ಎಂ) ಗುರುವಾರ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.

ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹಾಗೂ ಪಕ್ಷಕ್ಕೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ನೀಡುವಂತೆ ಎಂಎನ್‌ಎಂ ಚುನಾವಣಾ ಆಯೋಗವನ್ನು ಆಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವತ್ರಿಕ ಚುನಾವಣೆಯಲ್ಲಿ ಎಂಎನ್‌ಎಂ ‘ಬ್ಯಾಟರಿ ಟಾರ್ಚ್’ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಿತ್ತು.

ಮುಂಬರುವ ತಮಿಳುನಾಡು ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಪಕ್ಷ ರವಿವಾರ ಪ್ರಚಾರ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News