27,000 ಕೋ. ರೂ. ಮೌಲ್ಯದ ರಕ್ಷಣಾ ಸಾಮಗ್ರಿ ಖರೀದಿ ಪ್ರಸ್ತಾವಕ್ಕೆ ಡಿಎಸಿ ಅನುಮೋದನೆ

Update: 2020-12-17 18:30 GMT

ಹೊಸದಿಲ್ಲಿ, ಡಿ. 17: ದೇಶೀಯವಾಗಿ ವಿನ್ಯಾಸಗೊಳಿಸಲಾದ ಮುನ್ನೆಚ್ಚರಿಕೆ ವಿಮಾನಗಳು ಹಾಗೂ ಗಸ್ತು ನೌಕೆಗಳು ಸೇರಿದಂತೆ 27,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಗುರುವಾರ ಅನುಮತಿ ನೀಡಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಡಿಎಸಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಿರುವ ನಡೆಯನ್ನು ‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮ ನಿರ್ಭರ್ ಭಾರತ’ ಉಪಕ್ರಮಕ್ಕೆ ಅತಿ ದೊಡ್ಡ ಉತ್ತೇಜನ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

  ಅನುಮೋದಿತ ಖರೀದಿ ಪ್ರಸ್ತಾವಗಳಲ್ಲಿ ಭಾರತೀಯ ವಾಯು ಪಡೆಗೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿನ್ಯಾಸಗೊಳಿಸಿದ ಮುನ್ನೆಚ್ಚರಿಕೆ ವಿಮಾನಗಳು, ಭಾರತೀಯ ನೌಕಾ ಪಡೆಗೆ ಮುಂದಿನ ತಲೆಮಾರಿನ ಕಡಲಾಚೆಯ ಗಸ್ತು ನೌಕೆಗಳು ಹಾಗೂ ಭಾರತೀಯ ಸೇನಾ ಪಡೆಗೆ ಮಾಡ್ಯುಲರ್ ಸೇತುವೆಗಳು ಒಳಗೊಂಡಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

ಸೇನಾ ಪಡೆ, ನೌಕಾ ಪಡೆ ಹಾಗೂ ವಾಯು ಪಡೆಗೆ ಅಗತ್ಯವಾಗಿರುವ ವಿವಿಧ ಆಯುಧಗಳು, ಉಪಕರಣಗಳು ಹಾಗೂ ವ್ಯವಸ್ಥೆಗಳನ್ನು ಖರೀದಿಸಲು ಸರಿ ಸುಮಾರು ಒಟ್ಟು 28,000 ಕೋಟಿ ರೂಪಾಯಿಯ 7 ಪ್ರಸ್ತಾವಕ್ಕೆ ಡಿಎಸಿ ಅನುಮೋದನೆ ನೀಡಿದೆ. ಇದರಲ್ಲಿ 7 ಖರೀದಿ ಪ್ರಸ್ತಾವಗಳು ಭಾರತದ ಕೈಗಾರಿಕೆಗಳಲ್ಲಿ ನಿರ್ಮಾಣ ಆಗಿರುವುದು ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News