ಚಾಲನಾ ಪರವಾನಿಗೆ, ವಾಹನ ನೋಂದಣಿ ವಾಯಿದೆಯನ್ನು 2021 ಮಾರ್ಚ್ ವರೆಗೆ ವಿಸ್ತರಿಸಿದ ಕೇಂದ್ರ ಸರಕಾರ

Update: 2020-12-27 17:00 GMT

ಹೊಸದಿಲ್ಲಿ, ಡಿ. 27: ಜನಸಂದಣಿ ಹೆಚ್ಚಳ ಹಾಗೂ ಕೊರೋನ ಸೋಂಕು ಹರಡುವುದನ್ನು ತಪ್ಪಿಸಲು ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳ ವಾಯಿದೆಯನ್ನು ಕೇಂದ್ರ ಸರಕಾರ ಮತ್ತೊಮ್ಮೆ ವಿಸ್ತರಿಸಿದೆ.

 ಅವಧಿ ಮೀರಿದ ಚಾಲನಾ ಪರವಾನಿಗೆ, ನೋಂದಣಿ ಪ್ರಮಾಣ ಪತ್ರ ಹಾಗೂ ಪರವಾನಿಗೆಯನ್ನು ಈಗ 2021 ಮಾರ್ಚ್ 31ರ ವರೆಗೆ ಬಳಸಬಹುದು ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ವಿವಿಧ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ನೀಡಿದ ನಿರ್ದೇಶನದಲ್ಲಿ ಹೇಳಿದೆ.

‘‘ಕೊರೋನ ಸೋಂಕು ಹರಡುವುದನ್ನು ತಡೆಯಲು ಮೇಲೆ ಹೇಳಿದ ಎಲ್ಲ ದಾಖಲೆಗಳು 2021 ಮಾರ್ಚ್ 31ರ ವರೆಗೆ ವಾಯಿದೆ ಹೊಂದಿದೆ ಎಂದು ಪರಿಗಣಿಸಬೇಕು.

2020 ಫೆಬ್ರವರಿ 1 ಅಥವಾ 2021 ಮಾರ್ಚ್ 31ರಂದು ಅವಧಿ ಪೂರ್ಣಗೊಳ್ಳುವ ಎಲ್ಲ ದಾಖಲೆಗಳಿಗೆ ಇದು ಅನ್ವಯವಾಗಲಿದೆ’’ ಎಂದು ನಿರ್ದೇಶನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News