ಪೂರ್ವಿಕ ಅಸ್ಮಿತೆ? ಆತ್ಮಗೌರವದ ಪರ್ಯಾಯ ಸಂಸ್ಕೃತಿಯತ್ತ....

Update: 2021-01-06 05:49 GMT
ಪೂರ್ವಿಕ ಅಸ್ಮಿತೆ? ಆತ್ಮಗೌರವದ ಪರ್ಯಾಯ ಸಂಸ್ಕೃತಿಯತ್ತ....
  • whatsapp icon

ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ಎಲ್ಲಾ ಆಧುನಿಕ ಮಾನವರ, ಅಂದರೆ ಹೋಮೋ ಸೇಪಿಯನ್ ಸೇಪಿಯನ್ನರ ಮೂಲ ನಿಸ್ಸಂಶಯವಾಗಿಯೂ ಆಫ್ರಿಕವೇ. ಎಲ್ಲರ ಪೂರ್ವಿಕ ಪಿತೃವೂ ಒಬ್ಬನೇ? ಕೋಯಿ ಸ್ಯಾನ್ ಬುಷ್‌ಮನ್ ಬುಡಕಟ್ಟಿನವನು. ಹಾಗಾಗಿಯೇ ಕ್ರಿಸ್ ಸ್ಟ್ರಿಂಜರ್ ಎಂಬ ವಿಜ್ಞಾನಿ ಹೇಳಿದ್ದು: (We are all Africans under the skin) ಎಂಬ ಮಾತನ್ನು. ಈ ಮೂಲ ಸತ್ಯವನ್ನು ಜೀರ್ಣಿಸಿಕೊಂಡವರ್ಯಾರೂ ಈ ಭೂಮಿಯ ಮೇಲಿನ ತನ್ನ ಸಹಜೀವಿಯನ್ನು ತನ್ನ ಶತ್ರು ಎಂದು ಭಾವಿಸುವುದು ಸಾಧ್ಯವೇ ಇಲ್ಲ? ಅದೂ ವಿನಾಕಾರಣವಾಗಿ!

ಲಕ್ಷ್ಮೀಪತಿ ಕೋಲಾರ ಅವರು ಹವ್ಯಾಸಿ ಪತ್ರಕರ್ತರು, ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕರು. ದಕ್ಷಿಣ ದಂಡಾಜೀವಿಕ, ಅಲ್ಲಮನ ಬಯಲಾಟ (ನಾಟಕ) ಕೃತಿಗಳನ್ನು, ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗಿರೀಶ್ ಕಾಸರವಳ್ಳಿ, ನಾಗಾಭರಣ ನಿರ್ದೇಶಿಸಿದ ರಾಜ್ಯ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಸಂಭಾಷಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ‘ಬೇರು’ ಮತ್ತು ‘ಮುಖಾಮುಖಿ’ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಬಹುಮಾನ ಬಂದಿದೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ, ಸಂಸ ರಂಗಪುರಸ್ಕಾರ ಪ್ರಶಸ್ತಿಗಳೂ ಸಂದಿವೆ. ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2013ರ ಸಾಲಿನಲ್ಲಿ ವರ್ಷದ ಶ್ರೇಷ್ಠ ಉದಯೋನ್ಮುಖ ಸಾಹಿತ್ಯ ಕೃತಿಯಾಗಿ ಅವರ ಅಲ್ಲಮನ ಬಯಲಾಟ ನಾಟಕಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ ಅವರು ತಮ್ಮ ತಂದೆ ಎಚ್.ಎಂ. ಗಂಗಾಧರಯ್ಯ ಹೆಸರಿನಲ್ಲಿ ನೀಡುವ ‘ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ’ ಲಭಿಸಿದೆ.

1950ರಲ್ಲೇ ಡಾ. ಮರೀಜಾ ಗಿಂಬುತಾಸ್ ಎಂಬ ಪುರಾತತ್ವ ಶಾಸ್ತ್ರಜ್ಞೆ ಮತ್ತು ಭಾಷಾ ವಿಜ್ಞಾನಿ ಇಂದಿಗೆ 4,500 ವರ್ಷಗಳ ಹಿಂದೆ ಯುರೇಷಿಯಾದ, ಅಂದರೆ ದಕ್ಷಿಣ ರಶ್ಯದ ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ, ಕಾಕಸಸ್ ಪರ್ವತಾವಳಿಯ ಉತ್ತರ ತಪ್ಪಲಿನ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲಿ ಇಂಡೋ-ಯುರೋಪಿಯನ್ ಭಾಷಾ ಪರಿವಾರದ ಪೂರ್ವಿಕರು ವಾಸವಾಗಿದ್ದರೆಂದು ಸಾಬೀತುಪಡಿಸಿದ್ದರು. ನಂತರ ಕ್ರಮೇಣ ಅವರು ಅಲ್ಲಿಂದ ಚೆದುರಿ ಯುರೋಪ್, ಮಧ್ಯಪ್ರಾಚ್ಯ, ಇರಾನ್ ಹಾಗೂ ಭಾರತ ದೇಶಗಳತ್ತ ವಲಸೆ ಹೊರಟರೆಂದು ಕೂಡ ಸಮರ್ಥನೀಯವಾಗಿ ತರ್ಕಿಸಿದ್ದರು. ಆಕೆಯ ಸಂಶೋಧನೆ ಕುರ್ಗನ್ ಸಿದ್ಧಾಂತವೆಂದು ಜಗತ್ತಿನ ಎಲ್ಲ ವಿದ್ವಾಂಸರ ಮನ್ನಣೆಗೂ ಪಾತ್ರವಾಗಿದೆ. ಕುರ್ಗನ್ ಎಂದರೆ ‘ಕೋಣೆ ಗೋರಿ’ ಅಥವಾ ‘ಸಾಮೂಹಿಕ ಹೆಣಗಳ ಗೋರಿ ದಿಬ್ಬ’ ಎಂದರ್ಥ. ಸ್ಟೆಪ್ ಭೂ ಪ್ರದೇಶದಲ್ಲಿ ಇಂತಹ ಕುರ್ಗನ್‌ಗಳು ಬೇಕಾದಷ್ಟಿವೆ. ಕಾಕಸಸ್ ಪರ್ವತಾವಳಿಯ ಉತ್ತರ ತಪ್ಪಲಿನಲ್ಲಿದ್ದವರಾದ್ದರಿಂದ ಆ ಜನಸಮುದಾಯವನ್ನೇ ಕಕೇಷಿಯನ್ ಜನಾಂಗವೆಂದು ಕರೆಯಲಾಯಿತು. ಈ ಕಕೇಷಿಯನ್ನರೆಲ್ಲರ ಮೂಲ ಭಾಷೆ ಬಹುಶಃ ಒಂದೇ ಆಗಿತ್ತು. ಅದನ್ನು ಆದಿಮ ಇಂಡೋ-ಯುರೋಪಿಯನ್ ಭಾಷೆಯೆಂದು ಭಾಷಾ ವಿಜ್ಞಾನಿಗಳು ಗುರುತಿಸುತ್ತಾರೆ. ಈ ಆದಿಮ ಭಾಷೆಯಿಂದ ಕುಡಿಯೊಡೆದದ್ದೇ ಗ್ರೀಕ್, ಲ್ಯಾಟಿನ್, ಜರ್ಮನಿಕ್, ಇಟಾಲಿಕ್, ಕೆಲ್ಟಿಕ್, ಸ್ಲಾವೋನಿಕ್, ಬಾಲ್ಟಿಕ್, ಆಲ್ಬೇನಿಯನ್, ಆರ್ಮೇನಿಯನ್ ಮತ್ತು ಇಂಡೋ-ಇರಾನಿಯನ್ ಎಂಬ ಪ್ರಮುಖ ಭಾಷಾ ಗುಂಪುಗಳು. ಇಂಗ್ಲಿಷ್, ಜರ್ಮನಿಕ್ ಭಾಷಾ ಪರಿವಾರಕ್ಕೆ ಸೇರಿದರೆ, ರಶ್ಯಯನ್ ಭಾಷೆಯು ಸ್ಲಾವೋನಿಕ್ ಗುಂಪಿನಲ್ಲಿ ರೂಪುಗೊಂಡದ್ದು. ಇಂಡೋ-ಇರಾನಿಯನ್ ಗುಂಪಿನಿಂದ ಪರ್ಷಿಯನ್, ಕುರ್ದಿಶ್, ಬಲೂಚಿ, ಪಾಶ್ತೋ ಭಾಷೆಗಳೂ ಹಾಗೂ ಇಂಡಿಕ್ ಅಥವಾ ಇಂಡೋ-ಆರ್ಯನ್ ಎಂದು ಗುರುತಿಸಲಾಗಿರುವ ಸಾಲಿನಲ್ಲಿ ಸಂಸ್ಕೃತ, ಪ್ರಾಕೃತ, ಪಾಲಿ, ಬೆಂಗಾಲಿ, ಹಿಂದಿ, ಗುಜರಾತಿ, ಸಿಂಧಿ, ಮರಾಠಿ, ಪಂಜಾಬಿ, ಉರ್ದುವಿನಂತಹ ಭಾಷೆಗಳೂ ಹುಟ್ಟಿಕೊಂಡವು. ಅಂದರೆ ಬಹುತೇಕ ಯುರೋಪಮೆರಿಕ, ಯುರೇಷಿಯಾ, ರಶ್ಯ, ಮಧ್ಯಪ್ರಾಚ್ಯ, ಅಫ್ಘಾನ್, ಉತ್ತರ ಭಾರತದ ಮೇಲ್ಜಾತಿಯ ಸಮುದಾಯಗಳು ತಮಿಳು ಮತ್ತು ಬುಡಕಟ್ಟೇತರ ಶ್ರೀಲಂಕಾನ್ನರು, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕದ ಬಿಳಿಯರು- ಇವರೆಲ್ಲರೂ ಕಕೇಷಿಯನ್ ಆರ್ಯ ಕುಲಗಳವರೇ. ಉತ್ತರ ಭಾರತದಲ್ಲಿ ಇಂದು ಇಂಡೋ-ಆರ್ಯನ್ ಭಾಷೆಗಳನ್ನಾಡುತ್ತಿದ್ದರೂ, ಅಲ್ಲಿನ ತಳಸಮುದಾಯಗಳವರು ಕಕೇಷಿಯನ್ನರಲ್ಲ ಮತ್ತು ದಕ್ಷಿಣ ಭಾರತದ ಬಹುತೇಕ ಮೇಲ್ಜಾತಿಯ ಮಂದಿ ತಮ್ಮನ್ನು ವೈದಿಕ ವಕ್ತಾರರಂತೆ ಗುರುತಿಸಿಕೊಂಡಿದ್ದರೂ ಅವರಲ್ಲಿ ದಕ್ಷಿಣದ ಉಳಿದೆಲ್ಲರಲ್ಲಿನಂತೆ ಅತ್ಯಲ್ಪ ಪ್ರಮಾಣದ ಕಕೇಷಿಯನ್ ವಂಶವಾಹಿ ಮಿಶ್ರಣಗೊಂಡಿದ್ದರೂ ಅವರ್ಯಾರೂ ಮೂಲತಃ ಕಕೇಷಿಯನ್ನರಲ್ಲ ಎಂಬ ಅಂಶ ಹೆಚ್ಚು ಗಮನಾರ್ಹವಾದುದು. ಅಂದರೆ ಅವರ ಪೂರ್ವಿಕರು ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಿಂದ ವಲಸೆ ಬಂದವರೂ ಅಲ್ಲ; ಇಂಡೋ-ಯುರೋಪಿಯನ್ ಭಾಷಾ ಪರಿವಾರದವರೂ ಅಲ್ಲ. ಹಾಗಾಗಿ ಇಂಡೋ-ಯುರೋಪಿಯನ್ ಭಾಷಿಕರ ಧರ್ಮ-ಸಂಸ್ಕೃತಿಗಳು ಕೂಡ ಮೂಲತಃ ಅವರದಲ್ಲ. ಇದು ಅವರಿಗೇ ತಿಳಿಯದ ಅವರ ಬೆನ್ನಿನ ಸತ್ಯ.

ಇಸವಿ 2000ದಲ್ಲಿ ಡಾ. ಬಮ್‌ಶದ್ ಎಂಬ ವಂಶವಾಹಿ ವಿಜ್ಞಾನಿ ‘ಉತ್ತರ ಭಾರತದ ಮೇಲ್ಜಾತಿಯ ಜನ ಇಲ್ಲಿನ ಕೆಳ ಜಾತಿಯವರಿಗಿಂತಲೂ ಯುರೇಷಿಯಾ ಮಧ್ಯ ಏಶ್ಯದ ಜನರೊಂದಿಗೆ ತಮ್ಮ ನಿಕಟ ವಂಶವಾಹಿ ಸಂಬಂಧಗಳನ್ನು ಹೊಂದಿದ್ದಾರೆ’ ಎಂಬ ಮಹತ್ವದ ಸಂಗತಿಯನ್ನು ತಮ್ಮ ವಂಶವಾಹಿ ಅಧ್ಯಯನದ ಮೂಲಕ ಬಹಿರಂಗಪಡಿಸಿದರು. ಅಂದರೆ ವಂಶವಾಹಿ ಸಂಶೋಧನೆಗಳೂ ಕುರ್ಗನ್ ಸಿದ್ಧಾಂತವನ್ನೇ ಬಲಪಡಿಸುವಲ್ಲಿ ನೆರವಾಯಿತು. 2003ರಲ್ಲಿ ಡಾ. ಸ್ಪೆನ್ಸರ್ ವೆಲ್ಸ್ ಎಂಬ ಮತ್ತೊಬ್ಬ ವಂಶವಾಹಿ ತಜ್ಞ 60ರಿಂದ 70 ಸಾವಿರ ವರ್ಷಗಳ ಹಿಂದೆ ‘ಔಟ್ ಆಫ್ ಆಫ್ರಿಕ’ ಸಿದ್ಧಾಂತದ ಪ್ರಕಾರ ಮೊದಲ ಮಾನವ ವಲಸೆಯ ಗುಂಪು ಆಫ್ರಿಕ ತೊರೆದು ಕರಾವಳಿ ಭಾರತದತ್ತ ಬಂದು, ನಂತರ ಮಲೇಶ್ಯ, ಇಂಡೋನೇಶ್ಯ, ಪಪುವಾ ನ್ಯೂಗಿನಿ ಮೂಲಕ ಆಸ್ಟ್ರೇಲಿಯ ತಲುಪಿತ್ತೆಂಬ ಅಂಶವನ್ನು ಸಾಬೀತು ಪಡಿಸಿದರು. ಹೀಗೆ ಭಾರತಕ್ಕೆ ಮೊದಲು ಬಂದವರೇ ದ್ರಾವಿಡಪೂರ್ವ ಆದಿವಾಸಿಗಳು ಮತ್ತು ಅಂಡಮಾನಿಗಳು. ನಂತರ 10,000 ವರ್ಷಗಳ ಆಸುಪಾಸಲ್ಲಿ ಹರಪ್ಪ ನಾಗರಿಕತೆಯ ಮೂಲಕ ಭಾರತ ಪ್ರವೇಶಿಸಿದವರೇ ಇಂದಿನ ದಕ್ಷಿಣ ಭಾರತದ ದ್ರಾವಿಡ ಭಾಷಿಕರು. ಈ ದ್ರಾವಿಡರು ಫರ್ಟೈಲ್ ಕ್ರೆಸೆಂಟ್ ಲ್ಯಾಂಡ್‌ನ ಇರಾನೀ ರೈತಾಪಿಗಳು ಹಾಗೂ ದ್ರಾವಿಡಪೂರ್ವ ಬೇಟೆಗಾರ ಆದಿವಾಸಿಗಳ ಸಂಕರದ ಕುಡಿಗಳು. ನಂತರ 3,500-3,750 ವರ್ಷಗಳ ಸರಿಸುಮಾರಲ್ಲಿ ಇಂಡೋ-ಯುರೋಪಿಯನ್ ಭಾಷಾ ಕುಟುಂಬದ ಆರ್ಯ ವೈದಿಕರು ಇರಾನ್-ಅಫ್ಘಾನ್ ಕಡೆಯಿಂದಲೂ, ಹಿಂದೂ ಕುಷ್ ಕಣಿವೆಯಿಂದಲೂ ಭಾರತ ಪ್ರವೇಶಿಸಿದರು. 2017ರಲ್ಲಿ ಡಾ. ಮಾರ್ಟಿನ್. ಪಿ. ರಿಚರ್ಡ್ಸ್ ಅವರು ಈ ಆರ್ಯನ್ನರ ಭಾರತ ಪ್ರವೇಶವನ್ನು ತಮ್ಮ ವಂಶವಾಹಿ ಅಧ್ಯಯನದ ಮೂಲಕವೇ ನಿರೂಪಿಸಿದ್ದಾರೆ. ಸ್ಥಳಾಭಾವದಿಂದಾಗಿ ಕರಾರುವಕ್ಕಾದ ವಿವರಗಳಿಗೆ ನಾನು ಹೋಗುತ್ತಿಲ್ಲ.

ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ಎಲ್ಲಾ ಆಧುನಿಕ ಮಾನವರ, ಅಂದರೆ ಹೋಮೋ ಸೇಪಿಯನ್ ಸೇಪಿಯನ್ನರ ಮೂಲ ನಿಸ್ಸಂಶಯವಾಗಿಯೂ ಆಫ್ರಿಕವೇ. ಎಲ್ಲರ ಪೂರ್ವಿಕ ಪಿತೃವೂ ಒಬ್ಬನೇ? ಕೋಯಿ ಸ್ಯಾನ್ ಬುಷ್‌ಮನ್ ಬುಡಕಟ್ಟಿನವನು. ಹಾಗಾಗಿಯೇ ಕ್ರಿಸ್ ಸ್ಟ್ರಿಂಜರ್ ಎಂಬ ವಿಜ್ಞಾನಿ ಹೇಳಿದ್ದು:(We are all Africans under the skin) ಎಂಬ ಮಾತನ್ನು. ಈ ಮೂಲ ಸತ್ಯವನ್ನು ಜೀರ್ಣಿಸಿಕೊಂಡವರ್ಯಾರೂ ಈ ಭೂಮಿಯ ಮೇಲಿನ ತನ್ನ ಸಹಜೀವಿಯನ್ನು ತನ್ನ ಶತ್ರು ಎಂದು ಭಾವಿಸುವುದು ಸಾಧ್ಯವೇ ಇಲ್ಲ? ಅದೂ ವಿನಾಕಾರಣವಾಗಿ!

 ಯುರೇಷಿಯಾದ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲೇ ಭಾರತದ ವೈದಿಕ ಆರ್ಯರೂ ಇದ್ದದ್ದು. ಅಲ್ಲಿಗೆ ಅವರು ಬರುವ ಮುಂಚೆ ಅನೇಕ ಕಕೇಷಿಯನ್ ಜನರ ಗುಂಪುಗಳೊಂದಿಗೆ ಬಹುಶಃ ಅವರು ಉತ್ತರ ಧ್ರುವದ ಆರ್ಕಟಿಕ್ ಪ್ರದೇಶದಲ್ಲಿದ್ದರು. ತಿಲಕರು ಕೂಡ ತಮ್ಮ ‘ದಿ ಆರ್ಕಟಿಕ್ ಹೋಮ್ ಇನ್ ದಿ ವೇದಾಸ್’ ಎಂಬ ಕೃತಿಯಲ್ಲಿ ಭಾರತದ ವೈದಿಕ ಆರ್ಯರ ತವರುನೆಲ ಉತ್ತರ ಧ್ರುವ ಪ್ರದೇಶವೇ ಎಂದು ಸಾಬೀತುಪಡಿಸಿದ್ದಾರೆ. ಉತ್ತರ ಧ್ರುವ ಪ್ರದೇಶದಲ್ಲಿನ ನಕ್ಷತ್ರಗಳ ಚಲನೆ, ಉಷಸ್, ದೀರ್ಘತಮ್ಮಸ್ಸು ಇತ್ಯಾದಿಗಳ ಕರಾರುವಾಕ್ಕಾದ ವಿವರಣೆ ಋಗ್ವೇದದಲ್ಲಿ ವರ್ಣಿಸಲ್ಪಟ್ಟಿರುವುದನ್ನು ಅವರು ಉದಾಹರಿಸಿದ್ದಾರೆ.

 ಯುರೇಷಿಯಾದ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲೇ ಭಾರತದ ವೈದಿಕ ಆರ

Writer - ಲಕ್ಷ್ಮೀಪತಿ ಕೋಲಾರ

contributor

Editor - ಲಕ್ಷ್ಮೀಪತಿ ಕೋಲಾರ

contributor

Similar News