ಬಳಕೆದಾರರಿಗೆ ಸ್ಪಷ್ಟನೆ ನೀಡಲು ಸ್ಟೇಟಸ್ ಮೊರೆ ಹೋದ ವಾಟ್ಸ್ ಆ್ಯಪ್!

Update: 2023-06-30 05:06 GMT
Editor : ✍️ Anon Suf

ವಾಟ್ಸ್ ಆ್ಯಪ್ ಖಾಸಗಿತನ ಫೀಚರ್ ಬಗ್ಗೆ ಬಳಕೆದಾರರಿಂದ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಆಕ್ರೋಶ ತಣಿಸಲು ವಾಟ್ಸ್ ಆ್ಯಪ್ ಹರಸಾಹಸ ಮಾಡುತ್ತಿದೆ. ಪತ್ರಿಕೆಗಳಲ್ಲಿ ಪೂರ್ತಿ ಪುಟ ಜಾಹೀರಾತುಗಳನ್ನು ನೀಡಿದ ಬೆನ್ನಲ್ಲೇ ತನ್ನ ಇನ್- ಆ್ಯಪ್ ಸ್ಟೇಟಸ್ ವಿಭಾಗದಲ್ಲೂ ಇದನ್ನು ಪೋಸ್ಟ್ ಮಾಡಿದೆ.

ನಾಲ್ಕು ಸ್ಟೇಟಸ್ ಪೋಸ್ಟ್ ಗಳನ್ನು ವಾಟ್ಸಪ್ ಮಾಡಿದ್ದು, "ಎಂಡ್ ಟೂ ಎಂಡ್ ಎನ್‍ಕ್ರಿಪ್ಟೆಡ್ ಆಗಿ ನಿಮ್ಮ ವೈಯಕ್ತಿಕ ಸಂಭಾಷಣೆಯನ್ನು ಸಂಸ್ಥೆ ಓದಲು ಅಥವಾ ಕೇಳಲು ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದೆ. ಜತೆಗೆ ಫೇಸ್‍ಬುಕ್‍ನೊಂದಿಗೆ ನಿಮ್ಮ ಕಾಂಟ್ಯಾಕ್ಟ್ ಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಅಧಿಕೃತ ಸ್ಟೇಟಸ್ ಪೋಸ್ಟ್ ಗಳು ಅಚ್ಚರಿದಾಯಕವಾಗಿದ್ದು, ಈ ಪೋಸ್ಟ್ ಗಳನ್ನು ಬಳಕೆದಾರರು ಕ್ಲಿಕ್ ಮಾಡಿದ ತಕ್ಷಣ ಅದು ಸ್ಟೇಟಸ್ ಫೀಡ್‍ನಿಂದ ಕಣ್ಮರೆಯಾಗುತ್ತದೆ. ವೀಕ್ಷಿಸಿದ ಪೋಸ್ಟ್ ಗಳಲ್ಲೂ ಅದು ಆ ಬಳಿಕ ಕಾಣಸಿಗುವುದಿಲ್ಲ. ಭಾರತದಲ್ಲಿ ಮಾತ್ರವಲ್ಲದೇ ಇತರ ಮಾರುಕಟ್ಟೆಗಳಲ್ಲೂ ಈ ವಿವರಣಾತ್ಮಕ ಪೋಸ್ಟ್ ಗಳನ್ನು ಪ್ರದರ್ಶಿಸುವಂತೆ ಕಂಡುಬರುತ್ತಿದೆ.

ಕಂಪನಿ ಇತ್ತೀಚೆಗೆ ಪರಿಷ್ಕರಿಸಿದ ಖಾಸಗಿತನ ನೀತಿಯು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹೊಸ ನೀತಿಯನ್ನು ಒಪ್ಪಿಕೊಳ್ಳಲು ಕಂಪನಿ ಫೆಬ್ರವರಿ 8ರ ಗಡುವು ವಿಧಿಸಿದೆ. ಇದಕ್ಕೆ ಬಳಕೆದಾರರಿಂದ ಮತ್ತು ಖಾಸಗಿತನ ಪ್ರತಿಪಾದಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Writer - ✍️ Anon Suf

contributor

Editor - ✍️ Anon Suf

contributor

Similar News