​ರಾಹುಲ್ ಗಾಂಧಿಗೆ ಕೊರೋನ ಪಾಸಿಟಿವ್

Update: 2021-04-20 10:17 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. 

ರಾಹುಲ್ ಅವರು ಕೊರೋನ ಸೋಂಕು ತಗಲಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.

ನನ್ನ ಸಂಪರ್ಕದಲ್ಲಿರುವವರು ಸುರಕ್ಷತಾ ನಿಯಮ  ಪಾಲಿಸಿ ಎಂದು ವಿನಂತಿಸಿದ್ದಾರೆ.

ಸೌಮ್ಯ ರೋಗ ಲಕ್ಷಣ ಅನುಭವವಾದ ನಂತರ ನನಗೆ ಕೋವಿಡ್ ಪರೀಕ್ಷೆಯಲ್ಲ್ಲಿ ಪಾಸಿಟಿವ್ ದೃಢಪಟ್ಟಿದೆ.  ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಎಲ್ಲಾ ಸುರಕ್ಷಾ ಶಿಷ್ಟಾಚಾರಗಳನ್ನು ಪಾಲಿಸಿ ಹಾಗೂ ಸುರಕ್ಷಿತವಾಗಿರಿ ಎಂದು 50ರ ವಯಸ್ಸಿನ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಬಳಿಕ  ಆಸ್ಪತ್ರೆಗೆ ದಾಖಲಾಗಿದ್ದರು. 88ರ ವಯಸ್ಸಿನ ಸಿಂಗ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News