ಕೊರೋನ 3ನೇ ಅಲೆ ಮಕ್ಕಳ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುವುದಿಲ್ಲ: ಮಕ್ಕಳ ತಜ್ಞ ಡಾ.ರಾಜೇಂದ್ರ ಕುಮಾರ್
ಮೈಸೂರು,ಜೂ.30: ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಆದರೆ ಮಾಧ್ಯಮಗಳು ತೋರಿಸುವಷ್ಟು ಗಂಭೀರ ಪರಿಣಾಮ ಬೀರುವುದಿಲ್ಲ, ಹಾಗಾಗಿ ಜನರು ಭಯ ಪಡುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞ ಮೈಸೂರು ಚಲುವಾಂಬ ಮಕ್ಕಳ ಆಸ್ಪತ್ರೆ ಆರ್.ಎಂ.ಓ. ಡಾ.ರಾಜೇಂದ್ರ ಕುಮಾರ್ ಅಭಿಪ್ರಾಯಿಸಿದರು.
ವೈದ್ಯರ ದಿನಾಚರಣೆ ಹಿನ್ನಲೆಯಲ್ಲಿ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ಕೊರೋನ ಮೂರನೇ ಅಲೆ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ನಲ್ಲಿ ಬರಬಹುದು ಎಂಬ ನಿರೀಕ್ಷೆ ಇದೆ. ಆದರೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂಬುದು ನಮ್ಮ ಹಿರಿಯ ತಜ್ಞ ವೈದ್ಯ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಡೈರೆಕ್ಟರ್ ರಣದೀಪ್ ಬುಲೇರಿಯಾ, ನೀತಿ ಆಯೋಗದ ವಿ.ಕೆ.ಪಾಲ್, ಐಸಿಎಂ ಆರ್ ಡೈರೆಕ್ಟರ್ ರವರ ಅಭಿಪ್ರಾಯ ಎಂದರು.
ಮೂರನೇ ಅಲೆ ಮಾಧ್ಯಮಗಳು ಬಿತ್ತರಿಸುವ ರೀತಿ ಗಂಭೀರ ಪರಿಣಾಮ ಬೀರುವುದಿಲ್ಲ. ಈಗಾಗಲೇ ದಿಲ್ಲಿ, ಮುಂಬೈನಲ್ಲಿ ಮಕ್ಕಳ ರಕ್ತ ಸ್ಯಾಂಪಲ್ ತೆಗೆದು ಆಂಟಿ ಬಾಡಿ ಲೆವೆಲ್ ಪರೀಕ್ಷೆ ಮಾಡಲಾಗಿದೆ. ಇದರ ಪ್ರಕಾರ ಮಕ್ಕಳ ದೇಹದ ರೂಗ ನಿರೋಧಕ ಶಕ್ತಿ ಶೇ.55-56 ರಷ್ಟಿರುವುದು ಖಚಿತಗೊಂಡಿದೆ. ಹಾಗಾಗಿ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಗಂಭೀರ ಪರಿಣಾಮ ಬೀರುವುದಿಲ್ಲ. ವ್ಯಾಕ್ಸಿನ್ ನೀಡಿದ ಮೇಲೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಆದರೆ ನೈಸರ್ಗಿಕವಾಗಿ ಮಕ್ಕಳ ಮೇಲೆ ಇನ್‍ಫೆಕ್ಷನ್ ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಕಳೆದ 6 ತಿಂಗ ಹಿಂದೆ ಹೈದರಬಾದ್‍ನಲ್ಲಿ ಇನ್‍ಫೆಕ್ಷನ್ ಆದ ಮಕ್ಕಳ ರೋಗನಿರೋಧಕ ಶಕ್ತಿ ಪರೀಕ್ಷೆ ಮಾಡಿದಾಗ 24% ಇತ್ತು. ಆದರೆ ಈಗ 56% ನಷ್ಟಿದೆ. ಹಾಗಾಗಿ ಮೂರನೇ ಅಲೆ ಮಕ್ಕಳ ಮೇಲೆ ಅಷ್ಟಾಗಿ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಈಗಾಗಲೇ ದೇಶದಲ್ಲಿ 32 ಕೋಟಿ ಅಷ್ಟು ಕೊರೋನ ಲಸಿಕೆ ನೀಡಲಾಗಿದೆ. ಇನ್ನೂ ಹತ್ತು ದಿನಗಳಲ್ಲಿ 12 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡುವ ಸಾಧ್ಯತೆ ಇದೆ. ಹಾಗಾಗಿ ಮೂರನೇ ಅಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಮಾಧ್ಯಮಗಳು ತೋರಿಸುವ ರೀತಿ ತೀವ್ರ ಸ್ವರೂಪದ ಮೂರನೇ ಅಲೆ ಬರುವುದಿಲ್ಲ ಎಂದು ಹೇಳಿದರು.