ಒಲಿಂಪಿಕ್ಸ್: ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಶರಣಾದ ವಿಶ್ವದ ನಂ.1 ಬಾಕ್ಸರ್ ಅಮಿತ್ ಪಂಘಾಲ್

Update: 2021-07-31 05:59 GMT
photo: twitter

ಟೋಕಿಯೊ:  ಭಾರತೀಯ  ಬಾಕ್ಸರ್ ಅಮಿತ್ ಪಂಘಾಲ್ (52 ಕೆಜಿ) ರಿಯೋ ಒಲಿಂಪಿಕ್ಸ್ ನಲ್ಲಿ  ಬೆಳ್ಳಿ ಪದಕ ವಿಜೇತ ಯುಬರ್ಜೆನ್ ಮಾರ್ಟಿನೆಝ್ ವಿರುದ್ಧ  1-4 ಅಂತರದಿಂದ ಸೋಲನುಭವಿಸಿದರು. ಈ ಸೋಲಿನೊಂದಿಗೆ ಒಲಿಂಪಿಕ್ಸ್ ನಿಂದ ನಿರ್ಗಮಿಸಿದರು.

 ಶನಿವಾರ ನಡೆದ  ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1  ಬಾಕ್ಸರ್ ಅಮಿತ್ ಕೊಲಂಬಿಯಾದ ಬಾಕ್ಸರ್ ನ ಪಟ್ಟುಬಿಡದ ದಾಳಿ ಮತ್ತು ವೇಗದಿಂದಾಗಿ ಸೋಲು ಕಂಡರು. ಕ್ರೀಡಾಕೂಟದಲ್ಲಿ ಪಾದಾರ್ಪಣೆ ಮಾಡಿದ ಅಗ್ರ ಶ್ರೇಯಾಂಕದ ಭಾರತೀಯ, ಆರಂಭಿಕ ಸುತ್ತಿನಲ್ಲಿ  ಬೈ ಪಡೆದಿದ್ದರು.

ಅಮಿತ್ ಆರಂಭಿಕ ಸುತ್ತಿನಲ್ಲಿಯೇ ಕೊಲಂಬಿಯಾ ಬಾಕ್ಸರ್ ವಿರುದ್ಧ  ಒತ್ತಡಕ್ಕೆ ಸಿಲುಕಿದರು.ಆ ನಂತರ ಚೇತರಿಸಿಕೊಳ್ಳಲಿಲ್ಲ.

ಮಾರ್ಟಿನೆಝ್ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಲೈಟ್ ವೇಟ್ ವಿಭಾಗದಲ್ಲಿ ಬೆಳ್ಳಿ  ಜಯಿಸಿದ್ದರು.

ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಶರಣಾದ ಅಮಿತ್ ಹಾಲಿ ಏಶ್ಯನ್ ಗೇಮ್ಸ್ ಹಾಗು ಏಶ್ಯನ್ ಚಾಂಪಿಯನ್ ಶಿಪ್ ಬಾಕ್ಸರ್ ಆಗಿದ್ದು, ಒಲಿಂಪಿಕ್ಸ್ ನಲ್ಲಿ ಪದಕದ ಭರವಸೆ ಮೂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News