ಆರ್ ಸಿಬಿ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ ಸೈಮನ್ ಕಟಿಚ್

Update: 2021-08-21 12:04 GMT
Photo: AFP

ಹೊಸದಿಲ್ಲಿ: ಮುಖ್ಯ ತರಬೇತುದಾರ ಸೈಮನ್ ಕಟಿಚ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್-2021 ಪುನರಾರಂಭವಾಗುವ ಮುನ್ನವೇ  ವೈಯಕ್ತಿಕ ಕಾರಣಗಳಿಂದ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ ಸಿಬಿ)ಶನಿವಾರ  ಘೋಷಿಸಿದೆ. ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪುನರಾರಂಭವಾಗಲಿದೆ.

ಕ್ರಿಕೆಟ್ ನಿರ್ದೇಶಕ ಮೈಕ್ ಹೆನ್ಸನ್ ಐಪಿಎಲ್ 2021 ಸೀಸನ್ ಮುಗಿಯುವವರೆಗೂ ಮುಖ್ಯ ಕೋಚ್ ಆಗಿ ಎರಡು ಹುದ್ದೆಯನ್ನು ನಿಭಾಯಿಸಲಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಸೈಮನ್ ಅವರು  ಕಳೆದ 2 ವರ್ಷಗಳಲ್ಲಿ ಆರ್‌ಸಿಬಿಯ ಪ್ರದರ್ಶನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2020 ರಲ್ಲಿ ತಂಡಕ್ಕೆ ಬಂದ ನಂತರ ಕಟಿಚ್ ಮುಖ್ಯ ತರಬೇತುದಾರರಾಗಿ ತಂಡದ ಸಿದ್ಧತೆಗಳನ್ನು ನೋಡಿಕೊಂಡಿದ್ದರು ಹಾಗೂ  ಹೆನ್ಸನ್ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಕಟಿಚ್ ಕೋಚಿಂಗ್ ಅಡಿಯಲ್ಲಿ ಆರ್ ಸಿಬಿ ಐಪಿಎಲ್-2020 ರಲ್ಲಿ ಪ್ಲೇ-ಆಫ್ ತಲುಪಿತು. 2016 ರ ನಂತರ ಮೊದಲ ಬಾರಿಗೆ ಅದು ಈ ಸಾಧನೆ ಮಾಡಲು ಯಶಸ್ವಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News