ತಮಿಳುನಾಡು: ಪೊಲೀಸ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿಗೆ ಚಿತ್ರಹಿಂಸೆ ಆರೋಪ; ಆಸ್ಪತ್ರೆಗೆ ದಾಖಲು

Update: 2021-11-19 17:16 GMT
ಸಾಂದರ್ಭಿಕ ಚಿತ್ರ

ಚೆನ್ನೈ,ನ.19: ಪರಿಶಿಷ್ಟ ಜಾತಿ ಕುರವರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೊಳಗಾಗಿದ್ದು, ಆತನನ್ನು ವಿಲ್ಲುಪುರಂ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಿರುವುದು ವರದಿಯಾಗಿದೆ.

ದರೋಡೆ ಆರೋಪದಲ್ಲಿ ಇತ್ತೀಚಿಗೆ ಕಲ್ಲಕುರಿಚಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಐವರ ಪೈಕಿ ಶಕ್ತಿವೇಲು ಎದೆನೋವು ಎಂದು ದೂರಿಕೊಂಡಿದ್ದ. ಆತ ಮಂಗಳವಾರದಿಂದ ಪೊಲೀಸ್ ಕಸ್ಟಡಿಯಲ್ಲಿದ್ದ.

ಬಂಧಿತ ಐವರು ವ್ಯಕ್ತಿಗಳು 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅವರು ಕಳ್ಳತನಗಳನ್ನು ನಡೆಸಿದ್ದನ್ನು ಒಪ್ಪಿಕೊಂಡಿದ್ದು,ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಮೂವರ ಬೆರಳಚ್ಚುಗಳು ಅಪರಾಧ ಸ್ಥಳಗಳಲ್ಲಿ ದೊರಕಿದ್ದ ಬೆರಳಚ್ಚುಗಳೊಂದಿಗೆ ತಾಳೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. 

ಆದರೆ ಶಕ್ತಿವೇಲುಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಕುರುವರ್ ಅಸೋಸಿಯೇಷನ್ ಕಾರ್ಯದರ್ಶಿ ಪಳನಿಯಮ್ಮಾಳ್ ಅವರು ಆರೋಪಿಸಿದ್ದಾರೆ.

ಬಂಧಿತ ಇತರ ಇಬ್ಬರಾದ ಧರ್ಮರಾಜ ಮತ್ತು ಪ್ರಕಾಶ ಅವರಿಗೂ ಪೊಲೀಸರು ಕಸ್ಟಡಿಯಲ್ಲಿ ಹಿಂಸಿಸಿದ್ದಾರೆ ಎಂದು ಇನ್ನೋರ್ವ ಬಂಧಿತನೊಂದಿಗೆ ಬಿಡುಗಡೆಗೊಂಡಿರುವ ಸೆಲ್ವಂ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News