ಭಾರತದಲ್ಲಿ ಟೊಮ್ಯಾಟೊ ನಡೆದು ಬಂದ ದಾರಿ

Update: 2021-12-02 05:02 GMT

ಟೊಮ್ಯಾಟೊ ಬೆಲೆ ಗಗನದೆತ್ತರಕ್ಕೆ ಏರಿರುವ ಹಿನ್ನೆಲೆಯಲ್ಲಿ ಭಾರತೀಯ ಕುಟುಂಬಗಳು ಟೊಮ್ಯಾಟೊ ರಹಿತ ಸಾಂಬಾರುಗಳ ರುಚಿ ನೋಡುವಂತಾಗಿದೆ. ಅದಕ್ಕೆ ಕಾರಣಗಳು ಹಲವಾರಿರಬಹುದು.

ಭಾರತದಲ್ಲಿ ಟೊಮ್ಯಾಟೊ ನಡೆದು ಬಂದದಾರಿಯನ್ನು ವಿವರಿಸಲಾಗಿದೆ.

ಬೇರೆ ಬೆಳೆಗಳಿಗೆ ಹೋಲಿಸಿದರೆ ಭಾರತೀಯ ಉಪಖಂಡಕ್ಕೆ ಟೊಮ್ಯಾಟೊ ಬಂದದ್ದು ಈಚೆಗೆ. 16ನೇ ಶತಮಾನದಲ್ಲಿ ಟೊಮ್ಯಾಟೊ ದಕ್ಷಿಣ ಅಮೆರಿಕದಿಂದ ಪೋರ್ಚುಗೀಸ್ ಸಂಬಾರ ಪದಾರ್ಥಗಳ ವ್ಯಾಪಾರಿಗಳೊಂದಿಗೆ ಮೊದಲು ಭಾರತಕ್ಕೆ ಬಂತು. ಭಾರತೀಯ ಉಪಖಂಡದಲ್ಲಿ ಟೊಮ್ಯಾಟೊ ಕುರಿತ ಮೊದಲ ಉಲ್ಲೇಖ ಕಾಣಿಸುವುದು 1801ರಲ್ಲಿ ಹೊರಬಂದ ಅಡುಗೆ ಪುಸ್ತಕ ನುಸ್ಕಾ-ಇ ನಿಯಾಮತ್‌ಖಾನ್‌ನಲ್ಲಿ.

ಈ ಪುಸ್ತಕದಲ್ಲಿ ಟೊಮ್ಯಾಟೊ ಸೂಪ್ ಮಾಡುವ ವಿಧಾನವನ್ನು ವಿವರಿಸಲಾಗಿದೆ. ಈ ಪುಸ್ತಕದಲ್ಲಿ ಟೊಮ್ಯಾಟೊವನ್ನು ವಿಲಾಯತಿ ಬೈಂಗನ್ ಎಂಬುದಾಗಿ ಕರೆಯಲಾಗಿದೆ. ವಿಲಾಯತಿ ಬೆಂಗನ್ ಎಂದರೆ ವಿದೇಶಿ ಬದನೆ.

ಭಾರತದ ವಿವಿಧ ಭಾಗಗಳ ಹೆಚ್ಚಿನ ಅಜ್ಜಿಯಂದಿರು ಈಗಲೂ ಟೊಮ್ಯಾಟೊವನ್ನು ವಿದೇಶಿ ಬದನೆ ಎಂಬುದಾಗಿ ಕರೆಯುತ್ತಾರೆ.

ಈ ಹೊಳೆಯುವ ‘ವಿದೇಶಿ ಬದನೆ’ಯು ದಾಲ್, ಸಾಂಬಾರು ಮತ್ತು ಚಟ್ನಿಗೆ ಆಕರ್ಷಕ ಕೆಂಪು ಬಣ್ಣ ಮತ್ತು ಸಿಹಿ-ಹುಳಿ ರುಚಿಯನ್ನು ನೀಡುತ್ತದೆ ಎನ್ನುವುದನ್ನು ಭಾರತೀಯ ಬಾಣಸಿಗರು ನಿಧಾನವಾಗಿ ಕಂಡುಕೊಂಡರು. ಬಳಿಕ ಅದು ಭಾರತೀಯ ಸಾಂಬಾರನ್ನೇ ಶಾಶ್ವತವಾಗಿ ಬದಲಿಸಿತು.

1832ರಲ್ಲಿ ವಿಲಿಯಮ್ ರೋಕ್ಸ್‌ಬರ್ ಬರೆದ ‘ಫ್ಲೋರಾ ಇಂಡಿಕ’ ಎಂಬ ಪುಸ್ತಕವು ಭಾರತೀಯ ಉಪಖಂಡದಾದ್ಯಂತ ಟೊಮ್ಯಾಟೊವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಹೇಳಿದೆ.

ಇಂದು ದಕ್ಷಿಣ ಭಾರತದಲ್ಲಿ, ಬೆಳಗ್ಗಿನ ಉಪಾಹಾರಗಳು ಟೊಮ್ಯಾಟೊದಿಂದಲೇ ತುಂಬಿವೆ. ಅವುಗಳೆಂದರೆ ತಕ್ಕಾಳಿ (ಟೊಮ್ಯಾಟೊ) ಚಟ್ನಿ, ಟೊಮ್ಯಾಟೊ ರೈಸ್ ಮತ್ತು ಇಡ್ಲಿ-ವಡೆಯ ಜೊತೆಗೆ ನೀಡಲಾಗುವ ಸಾಂಬಾರ್.

ಉತ್ತರ ಭಾರತದಲ್ಲೂ ಟೊಮ್ಯಾಟೊ ‘ಅಮ್ಮಂದಿರು’ ಮಾಡುವ ಸಾಂಬಾರಿನ ಅವಿಭಾಜ್ಯ ಅಂಗವಾಗಿದೆ. ಇಲ್ಲಿಯಾವುದೇ ತರಕಾರಿ ಅಥವಾ ಪ್ರೊಟೀನ್ ಸಾರುಗಳಿಗೆ ಕತ್ತರಿಸಿದ ನೀರುಳ್ಳಿ ಮತ್ತು ಟೊಮ್ಯಾಟೊಗಳನ್ನು ಸೇರಿಸಲಾಗುತ್ತದೆ. ಈ ಪೈಕಿ ಮಾಖ್ನಿ ಮತ್ತು ಲಬಾಬ್ದಾರ್ ಜನಪ್ರಿಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ