ಭಾರತದ 15 ಶ್ರೇಷ್ಠ ಕಾಮಿಡಿಯನ್‌ಗಳು

Update: 2021-12-02 08:35 GMT

ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಪಾಪ್ ಸಂಸ್ಕೃತಿಯು ಭಾರತೀಯ ಕಾಮಿಡಿ ವಲಯದಲ್ಲೂ ಭಾರೀ ಬದಲಾವಣೆಯನ್ನು ಉಂಟು ಮಾಡಿತು. ಕಳೆದ ದಶಕದಲ್ಲಿ ಭಾರತದಲ್ಲಿ ಹಲವು ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳು ಪ್ರವರ್ಧಮಾನಕ್ಕೆ ಬಂದರು. ಹಲವು ಕಾಮಿಡಿ ನಗೆ ಕ್ಲಬ್‌ಗಳು ಭಾರತದಾದ್ಯಂತ ಆರಂಭಗೊಂಡವು ಹಾಗೂ ಅವರ ಹಾಸ್ಯ ಚಟುವಟಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು. ಯೂಟ್ಯೂಬ್‌ನಿಂದ ಹಿಡಿದು ಟ್ವಿಟರ್‌ವರೆಗೆ ಭಾರತೀಯ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳು ಆನ್‌ಲೈನ್ ಸಂಭಾಷಣೆ, ಪಾಪ್‌ಕ್ಷೇತ್ರ ಮತ್ತು ಕಂಟೆಂಟ್ ಕ್ಷೇತ್ರಗಳಲ್ಲಿ ಹಲವು ಸಮಯದಿಂದ ಮುಂಚೂಣಿಯಲ್ಲಿದ್ದಾರೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳೆಂದರೆ ಸಭಿಕರ ಮುಂದೆ ವೇದಿಕೆಯಲ್ಲಿ ನಿಂತು ತಮ್ಮ ಹಾಸ್ಯ ಚಟಾಕಿಗಳಿಂದ ಜನರನ್ನು ರಂಜಿಸುವವರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ರಾಜಕೀಯವಾಗಿಯೂ ಸುದ್ದಿಯಲ್ಲಿದ್ದಾರೆ. ಇವರ ಚಟಾಕಿಗಳು ಸರಕಾರವನ್ನು ಮುಜುಗರಕ್ಕೆ ಸಿಲುಕಿಸುತ್ತಿದೆ. ವ್ಯವಸ್ಥೆಯನ್ನು ಇವರು ಅಣಕಿಸುವ ಕಾರಣಕ್ಕಾಗಿಯೇ ಇವರ ಮೇಲೆ ದೇಶದ್ರೋಹದಂತಹ ಆರೋಪಗಳನ್ನು ಲಗತ್ತಿಸಲಾಗುತ್ತಿದೆ. ಇಂದು ಇಂತಹ ಕಾಮಿಡಿಯನ್‌ಗಳ ವಿರುದ್ಧ ಪೊಲೀಸರು ನಿಗಾ ಇಡುತ್ತಿರುವುದು, ಅವರ ಕಾರ್ಯಕ್ರಮಗಳನ್ನು ನಿಷೇಧಿಸಲು ಮುಂದಾಗುತ್ತಿರುವುದು ವಿಷಾದನೀಯವಾಗಿದೆ. ನೀವು ಅನುಸರಿಸಬಹುದಾದ ಭಾರತದ ಪ್ರಮುಖ ಹಾಗೂ ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಕೃಪೆ: www.scrolldroll.com

1. ಅನುಭವ್ ಸಿಂಗ್ ಬಸ್ಸಿ

ವಕೀಲ ಪದವಿಯನ್ನು ಪಡೆದಿರುವ ಅನುಭವ್ ಸಿಂಗ್ ಬಸ್ಸಿ ಒಮ್ಮೆ ಯುಪಿಎಸ್‌ಸಿ ಪರೀಕ್ಷೆಯ ಆಕಾಂಕ್ಷಿಯಾಗಿದ್ದರು. ಬಳಿಕ ಆಹಾರ ಉದ್ಯಮದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ ಅಂತಿಮವಾಗಿ ಸ್ಟ್ಯಾಂಡ್-ಅಪ್‌ಕಾಮಿಡಿಯನ್ ಆದರು.

ಅವರ ‘ಹಾಸ್ಟೆಲ್’, ‘ವ್ಯಾಕ್ಸಿಂಗ್’ ಮತ್ತು ‘ಚೀಟಿಂಗ್’ ಎಂಬ ಹೆಸರಿನ ಕಾಮಿಡಿಗಳು ಅತ್ಯಂತ ಜನಪ್ರಿಯವಾಗಿದ್ದು, ಯೂಟ್ಯೂಬ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

2. ಅಭಿಶೇಕ್ ಉಪಮನ್ಯು

ಕೆಮಿಕಲ್ ಇಂಜಿನಿಯರ್ ಪದವೀಧರರಾಗಿರುವ ಅಭಿಶೇಕ್‌ಉಪಮನ್ಯು ರಿಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡಿದ್ದರು. ಬಳಿಕ ಬರಹಗಾರನಾಗಿ ‘ಆನ್‌ಏರ್ ವಿದ್ ಎಐಬಿ’ಯನ್ನು ಸೇರಿದರು. ಬಳಿಕ ಸ್ಟ್ಯಾಂಡ್-ಅಪ್‌ಕಾಮಿಡಿಯನ್‌ತನ್ನ ಹಾಸ್ಯಗಳಿಂದ ಜನರನ್ನು ರಂಜಿಸಿದರು. ಅವರ ‘ಫ್ರೆಂಡ್ಸ್’, ‘ಕ್ರೈಮ್’, ‘ದ ಕಾಸ್ಮಾಸ್’, ‘ಡೆಲ್ಲಿ’, ‘ಮುಂಬೈ ರಿಚ್ ಪೀಪಲ್‌ಆ್ಯಂಡ್ ಬ್ರೇಕ್‌ಅಪ್’, ‘ರೆಸ್ಪೆಕ್ಟಿಂಗ್‌ಎಲ್ಡರ್ಸ್’ ಮತ್ತು ‘ಡಿಸ್ಕ್ರಿಮಿನೇಶನ್’ ಜನಪ್ರಿಯ ಕಾಮಿಡಿಗಳು.

3. ಅಬಿಶ್ ಮ್ಯಾಥ್ಯೂ

ಅಬಿಶ್ ಮ್ಯಾಥ್ಯೂ ತನ್ನ ವೃತ್ತಿಜೀವನವನ್ನು ದಿಲ್ಲಿಯಲ್ಲಿ ರೆಡ್‌ಎಫ್‌ಎಮ್‌ನಲ್ಲಿ ಆರ್‌ಜೆ ಆಗಿ ಆರಂಭಿಸಿದರು. ಬಳಿಕ ಸ್ಟ್ಯಾಂಡ್-ಅಪ್‌ಕಾಮಿಡಿಯನ್‌ಆದರು. ಅವರ ‘ಸನ್‌ಆಫ್ ಅಬಿಶ್’ ಕಾರ್ಯಕ್ರಮವು ಯೂಟ್ಯೂಬ್‌ನಲ್ಲಿ ಭಾರೀ ಜನಪ್ರಿಯವಾಗಿದೆ. ಯೂಟ್ಯೂಬ್‌ನಲ್ಲಿ ಅವರು ಹಲವು ಯೂಟ್ಯೂಬ್ ತಾರೆಗಳು ಮತ್ತು ಬಾಲಿವುಡ್ ತಾರೆಗಳನ್ನು ಆಹ್ವಾನಿಸಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.

4. ಅದಿತಿ ಮಿತ್ತಲ್

ಭಾರತದ ಮುಂಚೂಣಿಯಲ್ಲಿರುವ ಮಹಿಳಾ ಸ್ಟ್ಯಾಂಡ್-ಅಪ್ ಕಾಮಿಡಿಗಳ ಪೈಕಿ ಅದಿತಿ ಮಿತ್ತಲ್ ಪ್ರಮುಖರು. ಅವರು ಜಗತ್ತಿನಾದ್ಯಂತ ಹಲವಾರು ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 2013ರಲ್ಲಿ ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ‘100 ಮಹಿಳೆಯರ ಸಮ್ಮೇಳನ’ಕ್ಕೆ ಅವರನ್ನು ಬಿಬಿಸಿಯು ಆಹ್ವಾನಿಸಿತ್ತು. ಅವರು ಅಮೆರಿಕದ ಸಾಕ್ಷ್ಯಚಿತ್ರ ‘ಸ್ಟ್ಯಾಂಡ್-ಅಪ್ ‘ಪ್ಲಾನೆಟ್’ನಲ್ಲೂ ಕಾಣಿಸಿಕೊಂಡಿದ್ದಾರೆ. ಸಾಂಸ್ಕೃತಿಕ ವಿಷಯಗಳಿಂದ ಹಿಡಿದು ಭಾರತದಲ್ಲಿ ಮಹಿಳೆಯರ ಸಮಸ್ಯೆಗಳವರೆಗೆ ವಿವಿಧ ವಿಷಯಗಳನ್ನು ಅವರುತನ್ನ ಹಾಸ್ಯಕ್ಕೆ ಬಳಸಿಕೊಳ್ಳುತ್ತಾರೆ. ‘ದ ಸ್ಟೋರಿ ಆಫ್ ಮಧುಮಕ್ಕಿ’ ಮತ್ತು ‘ಬ್ರಾ ಶಾಪಿಂಗ್’ ಅವರಜನಪ್ರಿಯ ಕಾರ್ಯಕ್ರಮಗಳ ಪೈಕಿ ಕೆಲವು.

5. ಅಪೂರ್ವ ಗುಪ್ತಾ

ಇಂಜಿನಿಯರಿಂಗ್ ಪದವೀಧರರಾಗಿರುವ ಅಪೂರ್ವ ಗುಪ್ತ, ಕಾಲೇಜು ಉತ್ಸವಗಳು ಮತ್ತು ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಭಾರತೀಯ ಮಧ್ಯಮ ವರ್ಗದ ಕುಟುಂಬ ಮತ್ತು ಸಂಸ್ಕೃತಿಯನ್ನು ಅವರು ವಿಡಂಬಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರು ‘ಗುಪ್ತಾಜಿ’ಯಾಗಿ ಕಾಣಿಸಿಕೊಳ್ಳುತ್ತಾರೆ. ‘ಗುಪ್ತಾಜಿ ಕಿ ಏರೋಪ್ಲೇನ್ ವಾಲಿ ಜರ್ನಿ’ ಮತ್ತು ‘ಆ್ಯಪಲ್ ಮೈಕ್ರೋಮ್ಯಾಕ್ಸ್ ಪತ್ಲಿ ಪಿನ್ ವಾಲಾ ಚಾರ್ಜರ್’ ಅವರ ಕೆಲವು ಜನಪ್ರಿಯ ಕಾರ್ಯಕ್ರಮಗಳು.

6. ಅತುಲ್ ಖಾತ್ರಿ

ಇಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರರಾಗಿರುವ ಅತುಲ್‌ಖಾತ್ರಿ, ತನ್ನ ಕುಟುಂಬದ ಒಡೆತನದ ಕಂಪ್ಯೂಟರ್‌ಉದ್ಯಮದಲ್ಲಿ ಸಿಇಒ ಆಗಿ ಕೆಲಸ ಮಾಡಿದ್ದರು. ಬಳಿಕ ಅವರು ಪರ್ಯಾಯ ವೃತ್ತಿಜೀವನವಾಗಿ ಸ್ಟ್ಯಾಂಡ್-ಅಪ್‌ಕಾಮಿಡಿಯನ್ನು ಆಯ್ಕೆ ಮಾಡಿಕೊಂಡರು. ಅವರು ಹಲವು ಕಾಮಿಡಿ ಕ್ಲಬ್‌ಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ ಹಾಗೂ ಈಸ್ಟ್ ಇಂಡಿಯ ಕಂಪೆನಿ ಎಂಬ ಹಾಸ್ಯ ಗುಂಪಿನ ಸದಸ್ಯರಾಗಿದ್ದಾರೆ.

ಅವರು ಹಲವು ಒಟಿಟಿ ಕಾರ್ಯಕ್ರಮಗಳು ಮತ್ತು ಪ್ರಸಿದ್ಧ ಬ್ರಾಂಡ್‌ಗಳ ಹಲವಾರು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಅತುಲ್‌ಖಾತ್ರಿ ಆನ್‌ದ ಜಸ್ಟಿನ್ ಬೈಬರ್ ಕಾನ್ಸರ್ಟ್’ ಮತ್ತು ‘ವೆನ್‌ಯುವರ್‌ಚೈಲ್ಡ್‌ಟರ್ನ್ಸ್ 18’ ಎನ್ನುವುದು ಅವರ ಜನಪ್ರಿಯ ಕಾಮಿಡಿಗಳ ಪೈಕಿ ಕೆಲವು.

7. ವಿಶ್ವಕಲ್ಯಾಣ ರಾತ್

ಒಡಿಶಾ ರಾಜ್ಯದವರಾಗಿರುವ ವಿಶ್ವಕಲ್ಯಾಣ ರಾತ್ ಭಾರತದ ಅತ್ಯಂತ ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳ ಪೈಕಿ ಒಬ್ಬರು. ಸಹ ಕಾಮಿಡಿಯನ್ ಕಾನನ್‌ಗಿಲ್‌ಜೊತೆಗಿನ ಅವರ ಚಿತ್ರ ವಿಮರ್ಶೆಯ ಅನುಕರಣೆಗಳು ಜನಪ್ರಿಯವಾಗಿವೆ. ದೇಶಾದ್ಯಂತವಿರುವ ಕಾಮಿಡಿ ಕ್ಲಬ್‌ಗಳು ಮತ್ತು ಹಲವಾರು ಒಟಿಟಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

‘ವಿಶ್ವಕಲ್ಯಾಣರಾತ್- ಎಕ್ಸ್‌ಟ್ರೋವಟ್ಸ್‌ಆ್ಯಂಡ್‌ಕೇಯಸ್’ ಮತ್ತು ’ಉಬರ್‌ಆ್ಯಂಡ್ ಮೀ’ ಅವರ ಕೆಲವು ಪ್ರಸಿದ್ಧ ಹಾಸ್ಯ ಕಾರ್ಯಕ್ರಮಗಳು.

8. ಕಾನನ್ ಗಿಲ್

ವಿಶ್ವಕಲ್ಯಾಣ್ ರಾತ್ ಜೊತೆಗಿನ ಚಿತ್ರ ವಿಮರ್ಶೆಗಳ ಅನುಕರಣೆಯಿಂದ ಕಾನನ್‌ಗಿಲ್ ಪ್ರಸಿದ್ಧಿಗೆ ಬಂದರು. ಅಂದಿನಿಂದ ಅವರು ದೇಶದ ಉನ್ನತ ಕಾಮಿಡಿ ಕ್ಲಬ್‌ಗಳು ಮತ್ತು ಅಮೆಝಾನ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಮುಂತಾದ ಒಟಿಟಿ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಪ್ರೇಮ್ ಆಗನ್‌ರಿವ್ಯೆ’ ಮತ್ತು ‘ಸಿಬ್ಲಿಂಗ್ಸ್’ ಅವರ ಕೆಲವು ಪ್ರಮುಖ ಕಾರ್ಯಕ್ರಮಗಳು.

9. ಕೆನ್ನಿ ಸೆಬಾಸ್ಟಿನ್

ಕೆನ್ನಿ ಸೆಬಾಸ್ಟಿನ್ ಹಲವಾರು ಅಂತರ್‌ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಅಮೆಝಾನ್ ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಮುಂತಾದ ಒಟಿಟಿ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೀವು ನೋಡಬೇಕಾದ ಅವರ ಜನಪ್ರಿಯ ಕಾಮಿಡಿಗಳೆಂದರೆ ‘ಮಿಡಲ್ ಕ್ಲಾಸ್ ರೆಸ್ಟೋರೆಂಟ್ ಪ್ರಾಬ್ಲೆಮ್ಸ್ ಇಂಡಿಯನ್ ಪೇರೆಂಟ್ಸ್, ‘ಒಸಿಡಿ’ ಮತ್ತು ಇಲೆಕ್ಟ್ರಿಸಿಟಿ ಎಟ್ ಹೋಮ್’.

10. ಕುನಾಲ್ ಕಾಮ್ರ

ಈ ದಿನಗಳಲ್ಲಿ ಯಾವಾಗಲೂ ಸುದ್ದಿ ಮತ್ತು ವಿವಾದದಲ್ಲಿರುವವರು ಕುನಾಲ್ ಕಾಮ್ರ. ಅವರು ಹಲವು ವರ್ಷಗಳ ಕಾಲ ಜಾಹೀರಾತು ಸಂಸ್ಥೆಯೊಂದರಲ್ಲಿ ನಿರ್ಮಾಣ ಸಹಾಯಕನಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಕಾಮಿಡಿಯನ್ ಆದರು. ಅಂದಿನಿಂದ ಅವರು ಹಲವು ಜಾಹೀರಾತು ಚಿತ್ರಗಳು ಮತ್ತು ಒಟಿಟಿ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕಾಮಿಡಿಗಳು ಹೆಚ್ಚಾಗಿ ರಾಜಕಾರಣಿಗಳು ಮತ್ತು ಸರಕಾರಗಳ ಬಗ್ಗೆ ಇರುತ್ತವೆ. ‘ಪ್ಯಾಟ್ರಿಯಾಟಿಸಮ್ ದ ಗವರ್ನ್‌ಮೆಂಟ್’ ಮತ್ತು ‘ರೀವಿಸಿಟಿಂಗ್ ಡೀಮಾನಿಟೈಸೇಶನ್’ ಅವರ ಕೆಲವು ಪ್ರಖ್ಯಾತ ಕಾರ್ಯಕ್ರಮಗಳು.

ಅವರ ಕಾರ್ಯಕ್ರಮ ‘ಶಟ್‌ಅಪ್‌ಯಾ ಕುನಾಲ್!’ ಯೂಟ್ಯೂಬ್‌ನಲ್ಲಿ ಜನಪ್ರಿಯವಾಗಿದೆ. ಅವರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅರವಿಂದ್ ಕೇಜ್ರಿವಾಲ್, ಜಾವೇದ್ ಅಖ್ತರ್, ರವೀಶ್ ಕುಮಾರ್ ಮತ್ತು ಅಸದುದ್ದೀನ್ ಉವೈಸಿಯನ್ನು ಆಹ್ವಾನಿಸಿದ್ದಾರೆ.

11. ರಾಧಿಕಾ ವಾಝ್

ರಾಧಿಕಾ ವಾಝ್ ಹಿಂದಿನ ಕಾಲದ ಮಹಿಳಾ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳ ಪೈಕಿ ಒಬ್ಬರು. ಅವರು ದಿಟ್ಟ, ವಿಷಾದವಿಲ್ಲದ ಹಾಗೂ ಹಲವು ಸಂದರ್ಭಗಳಲ್ಲಿ ವಿವಾದಾಸ್ಪದ ಹಾಸ್ಯ ನಟನೆಗಳಿಗೆ ಖ್ಯಾತರಾಗಿದ್ದಾರೆ. ಸಮಾಜವು ಮಹಿಳೆಯರ ಬಗ್ಗೆ ಯಾವ ಧೋರಣೆ ಹೊಂದಿದೆ ಎನ್ನುವುದನ್ನು ಅವರು ತನ್ನದೇ ವಿಧಾನದಲ್ಲಿ ಹಾಸ್ಯಮಯವಾಗಿ ವಿಡಂಬಿಸುತ್ತಾರೆ.

‘ವೈ ಮೆನ್‌ಆ್ಯಂಡ್ ವಿಮೆನ್ ಹ್ಯಾವ್ ಸೆಪರೇಟ್ ಟಾಯಿಲೆಟ್ಸ್?’ ಎನ್ನುವುದು ಅವರ ಜನಪ್ರಿಯ ಕಾರ್ಯಕ್ರಮಗಳ ಪೈಕಿ ಒಂದು.

12. ರಾಹುಲ್ ಸುಬ್ರಮಣಿಯನ್

ರಾಹುಲ್ ಸುಬ್ರಮಣಿಯನ್ ತುಂಬಾ ಸಮಯ ಮಹೀಂದ್ರ ರೈಸ್‌ನಲ್ಲಿ ಇ-ಕಾಮರ್ಸ್, ಕಾರ್ಪೊರೇಟ್ ಬ್ರಾಂಡಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನ ಉಸ್ತುವಾರಿ ಹೊತ್ತಿದ್ದರು. ಬಳಿಕ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಪರಿವರ್ತನೆ ಹೊಂದಿದರು. ಭಾರತೀಯ ನಗರಗಳ ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ನಡೆಸಿಕೊಡುವ ಹಾಸ್ಯ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಅವರ ಕೆಲವು ಜನಪ್ರಿಯ ಕಾರ್ಯಕ್ರಮಗಳೆಂದರೆ ‘ಬ್ರೇಕ್‌ಅಪ್‌ಆ್ಯಂಡ್ ಎಂಬಿಎ’ ಮತ್ತು ‘ಇಂಡಿಯಾ ಆ್ಯಂಡ್ ಪಾಕಿಸ್ತಾನ್’.

13. ಸೋರಭ್ ಪಂತ್

ಭಾರತೀಯ ಕಾಮಿಡಿ ಸರ್ಕಲ್‌ಗೆ ತುಂಬಾ ಹಿಂದೆಯೇ ಸೇರ್ಪಡೆಗೊಂಡವರು ಸೋರಭ್ ಪಂತ್. ಅವರು ವೀರ್‌ದಾಸ್‌ಜೊತೆಗೆ ಕೆಲಸ ಮಾಡುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿದರು. ಅವರು 2012ರಲ್ಲಿ ಈಸ್ಟ್ ಇಂಡಿಯಾ ಕಾಮಿಡಿಯನ್ನು ಸ್ಥಾಪಿಸಿದರು. ಇದರ ಮೂಲಕ ಅವರು ಇತರ ಕಾಮಿಡಿಯನ್‌ಗಳನ್ನು ಸೇರಿಸಿಕೊಂಡು ವಿವಿಧ ದೇಶಗಳಲ್ಲಿ ಕಾರ್ಯಕ್ರಮ ನೀಡಿದರು. ‘ಇಂಜಿನಿಯರಿಂಗ್ ಕಾಲೇಜಸ್: ಸ್ಟುಪಿಡ್ ರೂಲ್ಸ್’ ಮತ್ತು ‘ಅಂಕಲ್ಸ್ ಆನ್ ವಾಟ್ಸ್ ಆ್ಯಪ್’ ಎನ್ನುವುದು ಅವರು ಜನಪ್ರಿಯ ಹಾಸ್ಯ ಕಾರ್ಯಕ್ರಮಗಳು.

14. ವೀರ್‌ದಾಸ್

ವೀರ್‌ದಾಸ್ ಭಾರತದ ಆರಂಭಿಕ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳ ಪೈಕಿ ಒಬ್ಬರು. ಅವರು ಹಲವಾರು ಬಾಲಿವುಡ್ ಚಿತ್ರಗಳು, ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಜಗತ್ತಿನಾದ್ಯಂತ ಪ್ರಮುಖ ಹಾಸ್ಯೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಅವರು ಫೆಮಿನಾ, ಮ್ಯಾಕ್ಸಿಮ್ ಮತ್ತು ತೆಹೆಲ್ಕಾ ಮುಂತಾದ ಹಲವಾರು ಪತ್ರಿಕೆಗಳಿಗೆ ಹಾಸ್ಯ ಅಂಕಣಗಳನ್ನು ಬರೆದಿದ್ದಾರೆ.

15. ಝಾಕಿರ್‌ಖಾನ್

ತನ್ನ ಹಾಸ್ಯ ಕಾರ್ಯಕ್ರಮಗಳಿಗಾಗಿ ಝಾಕಿರ್‌ಖಾನ್ ಆನ್‌ಲೈನ್‌ನಲ್ಲಿ ಭಾರೀ ಜನಪ್ರಿಯರಾಗಿದ್ದಾರೆ. ಅವರು 2012ರಲ್ಲಿ ಅಮೆರಿಕದ ಕಾಮಿಡಿ ಸೆಂಟ್ರಲ್ ವಾಹಿನಿ ನಡೆಸಿದ ಭಾರತದ ಶ್ರೇಷ್ಠ ಸ್ಟ್ಯಾಂಡ್‌ಅಪ್‌ಕಾಮಿಡಿಯನ್ ಸ್ಪರ್ಧೆಯಲ್ಲಿ ವಿಜೇತರಾದ ಬಳಿಕ ಜನಪ್ರಿಯರಾದರು. ಅವರು ಭಾರತೀಯ ಒಟಿಟಿ ವೇದಿಕೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

‘ವೆನ್ ಐ ಮೆಟ್ ಅ ಡೆಲ್ಲಿಗರ್ಲ್’, ‘ವಾಟ್ ಹ್ಯಾಪನ್ಸ್ ವೆನ್‌ಯು ಫೇಲ್‌ಇನ್‌ಆ್ಯನ್‌ಎಕ್ಸಾಮ್!’ ಮತ್ತು ‘ಲೈಫ್ ಮೇ ಚಾಹಿಯೇ ಇಝ್ಝತ್’ ಅವರ ಕೆಲವು ಜನಪ್ರಿಯ ಕಾರ್ಯಕ್ರಮಗಳು.

Writer - ಅನ್ಶಿಕಾ ಮಿಶ್ರಾ

contributor

Editor - ಅನ್ಶಿಕಾ ಮಿಶ್ರಾ

contributor

Similar News

ಜಗದಗಲ
ಜಗ ದಗಲ